ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರಾವಳಿ ಮಿಲನ’ 27ರಿಂದ

Last Updated 21 ಮೇ 2022, 15:47 IST
ಅಕ್ಷರ ಗಾತ್ರ

ಮಂಗಳೂರು: ನಗರದ ಸೇಂಟ್ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ (ಸಾಕಾ) ವತಿಯಿಂದ ದಕ್ಷಿಣ ವಲಯ 16ನೇ ಜೆಸ್ಯೂಟ್ ಹಳೆ ವಿದ್ಯಾರ್ಥಿಗಳ ಕಾಂಗ್ರೆಸ್ (ಜಾಯ್) ‘ಕರಾವಳಿ ಮಿಲನ’ ಕಾರ್ಯಕ್ರಮವು ಮೇ 27 ಮತ್ತು 28ರಂದು ಕಾಲೇಜಿನ ಎಲ್.ಎಫ್ ರಸ್ಕಿನಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇ 27ರಂದು ಮಧ್ಯಾಹ್ನ 3.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಜೆಸ್ಯೂಟ್ ಪ್ರಾಂತ್ಯದ ಪ್ರಾಂತೀಯ ಅಧಿಕಾರಿ ಫಾದರ್ ಡಯೋನಿಸಿಯಸ್ ವಾಜ್ ಎಸ್.ಜೆ., ಜಾಯ್‌ನ ರಾಷ್ಟ್ರೀಯ ಅಧ್ಯಕ್ಷ ಚೆಂತಿಲ್ ಕುಮಾರ್, ಫಾದರ್ ಸ್ವೀಬರ್ಟ್ ಡಿಸಿಲ್ವ ಭಾಗವಹಿಸುವರು. ಕರ್ನಾಟಕ, ಮಧುರೈ, ಚೆನ್ನೈ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ಪ್ರಾಂತ್ಯಗಳ ಜೆಸ್ಯೂಟ್ ಶಾಲೆಗಳು ಮತ್ತು ಕಾಲೇಜುಗಳ 25ರಿಂದ 75 ವರ್ಷದೊಳಗಿನ ಹಳೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಇಗ್ನೆಷಿಯಸ್ ವರ್ಷದ ಈ ಸಂದರ್ಭದಲ್ಲಿ ಪ್ರೊ.ಎಡ್ಮಂಡ್ ಫ್ರಾಂಕ್ ಅವರು ಬರೆದ ‘ಸೇಂಟ್ ಇಗ್ನೇಷಿಯಸ್ ಲಯೋಲಾ-ಕ್ಯಾನನ್ ಬಾಲ್ಡ್ ಟು ಸೇಂಟ್‌ಹುಡ್’ ಪುಸ್ತಕ ಬಿಡುಗಡೆಯಾಗಲಿದೆ. ಸಮಾವೇಶದ ಮೊದಲ ಅವಧಿಯಲ್ಲಿ ಯುವಜನರಲ್ಲಿ ಉದ್ಯಮಶೀಲತೆ ಉತ್ತೇಜಿಸುವ ಕುರಿತು ವಿಷಯ ಮಂಡನೆಯಾಗಲಿದೆ. ಎರಡನೆಯ ದಿನದ ಗೋಷ್ಠಿಯಲ್ಲಿ ಡಾ.ಜಿ.ಶ್ರೀನಿಕೇತನ್ ಅವರು ‘ಸುಸ್ಥಿರ ಅಭಿವೃದ್ಧಿಯಲ್ಲಿ ಯುವಕರನ್ನು ತೊಡಗಿಸಿಕೊಳ್ಳುವುದು’ ಕುರಿತು ಮಾತನಾಡಲಿದ್ದಾರೆ.ಸಾಮಾಜಿಕ ಕಾರ್ಯಕರ್ತೆ ಬೃಂದಾ ಅಡಿಗೆರ ‘ಲಿಂಗ ಸಂವೇದನೆ ಕುಟುಂಬಗಳು ಮತ್ತು ನಾನು’ ವಿಷಯ ಮಂಡಿಸಲಿದ್ದಾರೆ ಎಂದು ವಿವರ ನೀಡಿದರು.

ಕಾರ್ಯಕ್ರಮದ ಸಂಚಾಲಕ ಡಾ.ರಿಚರ್ಡ್ ಗೋನ್ಸಾಲ್ವಿಸ್, ಸಂಘಟನಾ ಕಾರ್ಯದರ್ಶಿ ಮೈಕಲ್ ಡಿಸೋಜ, ಸಾಕಾ ಅಧ್ಯಕ್ಷ ಸ್ಟೀಫನ್ ಪಿಂಟೊ, ಮಾಜಿ ಅಧ್ಯಕ್ಷ ಪ್ರೊ.ಎಡ್ಮಂಡ್ ಜೆ.ಬಿ.ಫ್ರಾಂಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT