ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟಕ– ಕ್ಲಿಕ್ಸ್ ಕ್ಯಾಪಿಟಲ್‍ ಒಡಂಬಡಿಕೆ

Published 16 ಜನವರಿ 2024, 22:46 IST
Last Updated 16 ಜನವರಿ 2024, 22:46 IST
ಅಕ್ಷರ ಗಾತ್ರ

ಮಂಗಳೂರು: ಯುಬಿ ಕೋ.ಲೆಂಡ್ ಪ್ಲಾಟ್‍ಫಾರ್ಮ್ ಮೂಲಕ ಸಹ-ಸಾಲ ನೀಡಲು ಎನ್.ಬಿ.ಎಫ್.ಸಿ.ಗಳಲ್ಲಿ ಒಂದಾದ ಕ್ಲಿಕ್ಸ್ ಕ್ಯಾಪಿಟಲ್ ಜೊತೆ ಕರ್ಣಾಟಕ ಬ್ಯಾಂಕ್ ಒಡಂಬಡಿಕೆ ಮಾಡಿಕೊಂಡಿದೆ.

ಈ ಒಪ್ಪಂದಕ್ಕೆ ಮಂಗಳವಾರ ಬೆಂಗಳೂರಿನಲ್ಲಿ ಸಹಿ ಹಾಕಲಾಗಿದೆ. ಈ ಬಗ್ಗೆ ಮಾತನಾಡಿದ ಕರ್ಣಾಟಕ ಬ್ಯಾಂಕ್‍ನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಎಚ್, ‌‘ಕ್ಲಿಕ್ಸ್ ಕ್ಯಾಪಿಟಲ್‍ನೊಂದಿಗೆ ಕರ್ಣಾಟಕ ಬ್ಯಾಂಕ್ ಮಾಡಿಕೊಂಡಿರುವ ಸಹ-ಸಾಲ ಒಡಂಬಡಿಕೆಯು ಬ್ಯಾಂಕ್‌ನ ಶಾಖೆಗಳ ಮೂಲಕ ಉನ್ನತ ಉತ್ಪನ್ನ ಮತ್ತು ಗ್ರಾಹಕ ಸೇವೆ, ಜೊತೆಗೆ ಎಂಎಸ್‍ಎಂಇ ವಲಯಗಳ ಡಿಜಿಟಲ್ ಸಾಲ ಪ್ರಕ್ರಿಯೆಯನ್ನು ಕೇಂದ್ರೀಕರಿಸಲಿದೆ. ಈ ವ್ಯವಸ್ಥೆಯಿಂದ ಎಂಎಸ್‍ಎಂಇ ವಲಯಕ್ಕೆ ಸುಲಭದಲ್ಲಿ ಆಕರ್ಷಕ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ’ ಎಂದರು.

ಕರ್ಣಾಟಕ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಶೇಖರ್ ರಾವ್ ಮಾತನಾಡಿ, ‘ವಿಸ್ತಾರವಾದ ಆರ್ಥಿಕ ಉತ್ಪನ್ನಗಳನ್ನು ಹಾಗೂ ಸೇವೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಸಮರ್ಪಕವಾಗಿ ಎಂಎಸ್‍ಎಂಇ ವಲಯಕ್ಕೆ ಒದಗಿಸಲು ಈ ಪಾಲುದಾರಿಕೆಯಿಂದ ಸಹಾಯವಾಗಲಿದೆ’ ಎಂದರು.

ಕ್ಲಿಕ್ಸ್ ಕ್ಯಾಪಿಟಲ್‍ನ ಸಿಇಒ ರಾಕೇಶ್ ಕೌಲ್ ಮಾತನಾಡಿ, ‘ಈ ಪಾಲುದಾರಿಕೆಯು ಎಲ್ಲ ಎಂಎಸ್‍ಎಂಇ ವಲಯಗಳನ್ನು ತಲುಪಲು ಸಾಧ್ಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT