ಕಾಸರಗೋಡು: ಪತ್ನಿ ಮೇಲೆ ಹಲ್ಲೆ ನಡೆಸಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಕಾಞಂಗಾಡಿನನಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಞಂಗಾಡ್ನ ಕಡಪ್ಪುರದ ಬಾವಾನಗರ ನಿವಾಸಿ ಇಬ್ರಾಹೀಂ ಮೃತ ವ್ಯಕ್ತಿ.
.ಕಾಸರಗೋಡು: ‘ಕುಣಿಯ’ದಲ್ಲಿ ಸಮಸ್ತ ಶತಮಾನೋತ್ಸವ ಸಂಭ್ರಮ.
ಇಬ್ರಾಹೀಂ ಅವರ ಪತ್ನಿ ಮರ್ಯಮ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ಮರ್ಯಮ್ ಅವರ ಕೂಗಾಟ ಕೇಳಿ ನೆರಮನೆಯವರು ಧಾವಿಸಿ ಬಂದಿದ್ದಾರೆ. ಈ ವೇಳೆ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಲೆಗೆ ಗಾಯಗಳಾಗಿದ್ದವು ಎಂದು ಹೊಸದುರ್ಗ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ಕಾಸರಗೋಡು: 5 ವರ್ಷಗಳ ನಂತರ ವ್ಯಕ್ತಿ ರಾಜಸ್ಥಾನದಲ್ಲಿ ಪತ್ತೆ.
ಘಟನೆ ನಡೆದ ಕೂಡಲೇ ಇಬ್ರಾಹೀಂ ಸ್ಥಳದಿಂದ ಪರಾರಿಯಾಗಿದ್ದಾನೆ. ಮರ್ಯಮ್ ಅವರನ್ನು ಕಾಂಙಂಗಾಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ.

ಇದಾದ ಬಳಿಕ, ಮನೆಯ ಪಕ್ಕದ ಮರದ ಕೊಂಬೆಗೆ ನೇಣು ಹಾಕಿಕೊಂಡ ರೀತಿಯಲ್ಲಿ ಇಬ್ರಾಹೀಂ ಶವ ಪತ್ತೆಯಾಗಿದೆ.
.ಕಾಸರಗೋಡು: ಗಂಟಲಲ್ಲಿ ಹಾಲು ಸಿಲುಕಿ ಮಗು ಮೃತ್ಯು.
ಹೊಸದುರ್ಗ ಪೊಲೀಸರು ಈ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ದಂಪತಿ ನಡುವಿನ ವೈವಾಹಿಕ ಸಮಸ್ಯೆಗಳುಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.

ತನಿಖೆಯ ಭಾಗವಾಗಿ ಕುಟುಂಬದ ಸದಸ್ಯರು ಮತ್ತು ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
.ತಿರುವನಂತಪುರ-ಕಾಸರಗೋಡು ಆರ್ಆರ್ಟಿಎಸ್ ಯೋಜನೆಗೆ ಕೇರಳ ಸರ್ಕಾರ ಸಮ್ಮತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.