ಾಸರಗೋಡು: ನೂರು ವಸಂತಗಳನ್ನು ಪೂರೈಸಿರುವ ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ಸಂಘಟನೆಯು ತನ್ನ ಶತಮಾನೋತ್ಸವ ಸಂಭ್ರಮಕ್ಕೆ ಇಲ್ಲಿನ ಕುಣಿಯ ಪಟ್ಟಣ ಸಜ್ಜಾಗಿದ್ದು, ಸಕಲ ಸಿದ್ಧತೆ ನಡೆದಿದೆ.

ಬುಧವಾರ (ಫೆ.4)ರಂದು ಕಾರ್ಯಕ್ರಮಕ್ಕೆ ಚಾಲನೆ ದೊರತಿದ್ದು, ಅಧ್ಯಯನ ಶಿಬಿರ, ಗ್ಲೋಬಲ್ ಎಕ್ಸ್ಪೊಬಳಿಕ ಫೆ.8ರಂದು ಅಂತರರಾಷ್ಟ್ರೀಯ ಮಹಾಸಮ್ಮೇಳನ ನಡೆಯಲಿದೆ. ಬೃಹತ್ ಸ್ವಾಗತ ಕಮಾನುಗಳೊಂದಿಗೆ ವೇದಿಕೆ ಸಿಂಗಾರಗೊಂಡಿದ್ದು, ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಕರ್ನಾಟಕ–ಕೇರಳದ ಭಾಗದಲ್ಲಿ ಕಾರ್ಯಕ್ರಮದ ಫ್ಲೆಕ್ಸ್, ಧ್ವಜಗಳು ರಾರಾಜಿಸುತ್ತಿವೆ.

ಏನಿದು ಸಮಸ್ತ, ಇದರ ಉದ್ದೇಶ:

ಇಸ್ಲಾಮಿನ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಸಮುದಾಯದೊಳಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ ಪಂಡಿತ ಸಂಘಟನೆಯ ಹೆಸರಾಗಿದೆ ಸಮಸ್ತ. ಭಾರತೀಯ ಮುಸ್ಲಿಮರ ಆಶಾಕಿರಣದಂತೆ ಗುರುತಿಸಿಕೊಂಡಿರುವ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಸದ್ಯ ಭಾರತದಲ್ಲಿ ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಸೇವೆ ವಿಸ್ತರಿಸಿಕೊಂಡಿದೆ. ಸಮುದಾಯದ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನ ರೂಪಿಸುವಲ್ಲಿ ಸಮಸ್ತ ನಿರ್ಣಾಯ ಪಾತ್ರ ವಹಿಸುತ್ತಿದೆ.

ಸಮಸ್ತ ಅಧೀನದಲ್ಲಿ 11,080 ಮದ್ರಸ:

1926ರಲ್ಲಿ ಜನ್ಮ ತಾಳಿದ ಸಮಸ್ತ ಆರಂಭದ ಯೋಜನೆಗಳ ಬಳಿಕ 1952ರ ಆಗಸ್ಟ್ 26ರಂದು ನಡೆದ ಬೋರ್ಡ್ ಸಭೆಯಲ್ಲಿ 10 ಮದ್ರಸಗಳನ್ನು (ಪಾಠ ಶಾಲೆ) ಅಂಗೀಕರಿಸಿತು. 2025ರ ಕಳೆದ ನವೆಂಬರ್ವರೆಗೆ 11,080ರಷ್ಟು ಮದ್ರಸಗಳು ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಕಾರ್ಯಾಚರಿಸುತ್ತಿವೆ.

ಸಮ್ಮೇಳನದ ಅಂಗಣದಲ್ಲಿ ಮಿನಿ ಆಸ್ಪತ್ರೆ:

ಸಮ್ಮೇಳನದ ಅಂಗವಾಗಿ 3 ದಿನ ನಡೆಯುವ ಅಧ್ಯಯನ ಶಿಬಿರದಲ್ಲಿ 33,313 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಕ್ಸ್ಪೋ ಹಾಗೂ ಸಮಾರೋಪದಂದು ಸುಮಾರು 10 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಭಾಗವಹಿಸುವವರ ಆರೋಗ್ಯ ರಕ್ಷಣೆಗಾಗಿ ಎಸ್ಕೆಎಸ್ಎಸ್ಎಫ್ನ ವೈದ್ಯಕೀಯ ವಿಭಾಗ ‘ಮೀಮ್’ ವತಿಯಿಂದ ಮಿನಿ ಆಸ್ಪತ್ರೆ ಮತ್ತು 20 ಲೈವ್ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. 1 ಸಾವಿರ ಶೌಚಾಲಯ, ಸ್ನಾನದ ಮನೆ, ನಮಾಜಿನ ಮುನ್ನ ಏಕಕಾಲದಲ್ಲಿ 1 ಸಾವಿರ ಮಂದಿ ಕೈಕಾಲು ಶುದ್ಧೀಕರಿಸುವ ವುಲೂಹ್ ಮಾಡುವುದಕ್ಕಾಗಿ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ವ್ಯವಸ್ಥೆಯನ್ನು ಎಸ್ಕೆಎಸ್ಎಸ್ಎಫ್ ವಿಕಾಯ ತಂಡದ ಸಾವಿರಾರು ಮಂದಿ ಸ್ವಯಂಸೇವಕರು ನೋಡಿಕೊಳ್ಳುತ್ತಿದ್ದಾರೆ.

500 ಎಕರೆ ಜಾಗದಲ್ಲಿ ಸಮಾವೇಶ:

500 ಎಕರೆ ಜಾಗದಲ್ಲಿ ಸಮ್ಮೇಳನ ನಡೆಯಲಿದೆ. ಜಾಗ ಸಮತಟ್ಟು ಮಾಡುವುದಕ್ಕಾಗಿ ಮತ್ತು ಸ್ವಚ್ಛತೆ ಕಾಯ್ದುಕೊಳ್ಳುವುದಕ್ಕಾಗಿ 2 ಹೊಸ ಜೆಸಿಬಿ ಖರೀದಿ ಮಾಡಲಾಗಿದೆ. 3,313 ಮಂದಿಗೆ 3 ದಿನಗಳ ವಸತಿ, ಆಹಾರ ಇತರೆ ವ್ಯವಸ್ಥೆ ಮಾಡಲಾಗಿದೆ. ಫೆ.6ರಂದು ನಡೆಯುವ ತರಬೇತಿಗೆ 23 ಸಾವಿರ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 8ರಂದು ಸಮಾವೇಶಕ್ಕೆ ಬರುವ ಗಣ್ಯರಿಗೆ 1,200 ಆಸನ ವ್ಯವಸ್ಥೆ ಇರುವ ವೇದಿಕೆ, ಇದರ ಸಲುವಾಗಿ ಜರ್ಮನ್ ಟೆಕ್ನಾಲಜಿ ಆಧಾರಿತ ಮೂರು ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ.

ಅಲ್ಲಲ್ಲಿ ಟ್ಯಾಂಕ್ನಲ್ಲಿ ನೀರಿನ ವ್ಯವಸ್ಥೆ, ವಸ್ತು ಪ್ರದರ್ಶನ, ನೂರಾರು ಮಾರಾಟ ಮಳಿಗೆಗಳು ಸೇರಿ ಎಲ್ಲವನ್ನೂ ವ್ಯವಸ್ಥಿತವಾಗಿ ರೂಪುಗೊಳಿಸಲಾಗಿದೆ. ವೇದಿಕೆ ಕಾರ್ಯಕ್ರಮಕ್ಕೆ ಯಾರಿಂದೂ ಧನ ಸಹಾಯ, ನಿಧಿ ಸಂಗ್ರಹ ಮಾಡಿಲ್ಲ. ಖರ್ಚು ವೆಚ್ಚವನ್ನು ಕುಣಿಯ ನಿವಾಸಿ, ಉದ್ಯಮಿ ಇಬ್ರಾಹಿಂ ಎಂಬವರು ವಹಿಸಿಕೊಂಡಿರುವುದು ವಿಶೇಷವಾಗಿದೆ.

ಏಕತೆ ಸಾಮಾಜಿಕ ಭದ್ರತೆಗಾಗಿ ಸಮಸ್ತ ಅಸ್ತಿತ್ವಕ್ಕೆ ‘ಸಮ್ಮೇಳನ ಎಂದರೆ ಒಂದಿಷ್ಟು ಲಕ್ಷ ಜನ ಬಂದು ಹೋಗುವುದು ಅಲ್ಲ. ಇದೊಂದು ಆಧ್ಯಾತಿಕ ಲೋಕ ಆಗಬೇಕಾಗಿದೆ. ಏಕತೆ ಮತ್ತು ಸಾಮಾಜಿಕ ಭದ್ರತೆಗೆ ಸಮಸ್ತದ ಅಸ್ವಿತ್ವ ಅನಿವಾರ್ಯ. ಸಂಸ್ಕಾರ ವಿಜ್ಞಾನ ಶಿಕ್ಷಣ ಸಹೋದರತೆ ಮೊಳಗಬೇಕು. ನಮ್ಮಲ್ಲಿರುವ ಪರಸ್ಪರ ದೂಷಣೆ ಅಪಸ್ವರ ಅಪನಂಬಿಕೆ ದೂರವಾಗಬೇಕು. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾಗಿದೆ. ಇದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ. ಇದು ಈ ಸಮ್ಮೇಳನದ ಉದ್ದೇಶ’ ಎಂದು ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲೆಮಾದ ರಾಷ್ಟ್ರೀಯ ಅಧ್ಯಕ್ಷ ಸೈಯದುಲ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ‘ಪ್ರಜಾವಾಣಿ’ಗೆ ತಿಳಿಸಿದರು. ‘

ಐದು ನಡೆಯುವ ಸಮಸ್ತ ಶತಾಬ್ದಿ ಅಧ್ಯಯನ ಶಿಬಿರದಲ್ಲಿ ಸಾವಿರಾರು ಸ್ವಯಂ ಸೇವಕರು ಸಮರ್ಪಣಾ ಮನೋಭಾವದಿಂದ ದುಡಿಯುತ್ತಿದ್ದಾರೆ. ಧಾರ್ಮಿಕ ಪಂಡಿತರು ಸಂಘಟಿಸಿದ ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ಸಮ್ಮಿಲನ ಇದಾಗಿದೆ’ ಎಂದು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕೂರ್ನಡ್ಕ ನಿವಾಸಿ ಅಬ್ದುಲ್ ಖಾದರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.