ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಿಪಳ್ಳ: 12 ಜಾನುವಾರು ವಶ

Published 30 ಮೇ 2024, 6:26 IST
Last Updated 30 ಮೇ 2024, 6:26 IST
ಅಕ್ಷರ ಗಾತ್ರ

ಸುರತ್ಕಲ್‌: ಕಾಟಿಪಳ್ಳದ  ಗ್ರಾಮದ 8ಎ ಬ್ಲಾಕ್ ಮಸೀದಿ ಬಳಿಯ ಖಾಲಿ ಕಂಪೌಂಡ್‌ ಒಳಗೆ ಕಟ್ಟಿಹಾಕಿದ್ದ 12 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಸುರತ್ಕಲ್‌ ಠಾಣೆಯ ಪಿಎಸ್‌ಐ ರಘು ನಾಯಕ್‌ ಅವರು ಸಿಬ್ಬಂದಿ ಜೊತೆ ಗಸ್ತು ತಿರುಗುತ್ತಿದ್ದಾಗ ಕಾಟಿಪಳ್ಳದಲ್ಲಿ ಜಾನುವಾರುಗಳನ್ನು ವಧೆ ಮಾಡುವ ಸಲುವಾಗಿ ಕಟ್ಟಿ ಹಾಕಿದ್ದ ಬಗ್ಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ಧಾವಿಸಿದಾಗ ಅಲ್ಲಿ 12 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿದ್ದು ಕಂಡುಬಂತು. ಈ ಜಾನುವಾರಗಳ ಅಂದಾಜು ಮೌಲ್ಯ ₹ 3 ಲಕ್ಷ. ಈ ಸಂಬಂಧ ಇಬ್ರಾಹಿಂ ಎಂಬವರ  2020ರ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT