ಚುನಾವಣಾ ಬಾಂಡ್ ಪಡೆದಿದ್ದನ್ನು ಮುಂದಿಟ್ಟು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ‘ರಾಜಕೀಯ ಪಕ್ಷಕ್ಕೆ ಜನರಿಂದ ದೇಣಿಗೆ ಪಡೆಯುವ ಹಕ್ಕಿದೆ. ಎರಡು ಪ್ರಕರಣಗಳನ್ನು ಹೋಲಿಸುವುದು ಕತ್ತೆ ಮತ್ತು ಕುದುರೆಯನ್ನು ಹೋಲಿಸಿದಂತೆ. ಚುನಾವಣಾ ಬಾಂಡ್‌ನಲ್ಲಿ ಹಣ ಪಡೆದ ರಾಜಕೀಯ ಪಕ್ಷದವರೆಲ್ಲರೂ ರಾಜೀನಾಮೆ ನೀಡುತ್ತಾರೆಯೇ’ ಎಂದು ಪ್ರಶ್ನಿಸಿದರು.