ಮಂಗಳವಾರ, ಜುಲೈ 27, 2021
25 °C

ಮಂಗಳೂರು: ಅಕ್ಕಿ, ದವಸ ಧಾನ್ಯ ಕಿಟ್ ವಿತರಣೆ: ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ 160 ಜನರಿಗೆ ಪ್ರಸಾದ್ ಕದ್ರಿ ನೇತೃತ್ವದಲ್ಲಿ ಶನಿವಾರ ಮನೆಗೆ ತೆರಳಿ ಅಕ್ಕಿ, ದಿನಸಿ ಸಾಮಗ್ರಿ ನೀಡಲಾಯಿತು.

ಕದ್ರಿ ದೇವಸ್ಥಾನದ ಬಳಿಯಿರುವ ಗೋಕುಲ್ ಹಾಲ್‌ನಲ್ಲಿ ನಡೆದ ಸಾಂಕೇತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಚಾಲನೆ ನೀಡಿದರು.

ಯವರು ಲೊಕ್ ಡೌನ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಕ್ಕಿ, ದವಸ ಧಾನ್ಯಗಳ ಕಿಟ್ ವಿತರಣೆಯನ್ನು ಪ್ರಸಾದ್ ಕದ್ರಿ ಅವರು ದಾನಿಗಳ ಸಹಕಾರದಿಂದ ಮಾಡುವ ಅಮೂಲ್ಯವಾದ ಸಮಾಜಮುಖಿ ಕೆಲಸ ನಿಜಕ್ಕೂ ಸುತ್ಯರ್ಹ. ಹಸಿದ ಹೊಟ್ಟೆಗೆ ಆಹಾರ ಪೂರೈಸುವ ಕಿಟ್ ವಿತರಣೆ ಉತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಸೂರಜ್ ಕದ್ರಿ, ಪ್ರಸಾದ್ ಕದ್ರಿ, ವಿವೇಕ್ ಆಚಾರ್ಯ, ರಾಜೇಶ್ ಆಚಾರ್ಯ, ಉಮೇಶ್ ಆಚಾರ್ಯ ಕದ್ರಿ, ಗೋಕುಲ್ ಕದ್ರಿ, ಸುಜೀರ್ ವಿನೋದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು