ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಸಿ: ಕ್ಯಾನ್ಸರ್ ಆರೈಕೆ ಕೇಂದ್ರದ ಉದ್ಘಾಟನೆ ನಾಳೆ

Published 25 ಜನವರಿ 2024, 5:25 IST
Last Updated 25 ಜನವರಿ 2024, 5:25 IST
ಅಕ್ಷರ ಗಾತ್ರ

ಮಂಗಳೂರು: ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ ಆರಂಭಿಸಲಾಗಿದ್ದು, ಇದರ ಉದ್ಘಾಟನೆ ಜ.26ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಕೆಎಂಸಿ ಮಂಗಳೂರಿನ ಡೀನ್‌ ಡಾ. ಬಿ. ಉನ್ನಿಕೃಷ್ಣನ್‌ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಕೇಂದ್ರದಲ್ಲಿ ರೇಡಿಯೇಷನ್‌ ಆಂಕಾಲಜಿ, ಮೆಡಿಕಲ್‌ ಆಂಕಾಲಜಿ, ಸರ್ಜಿಕಲ್‌ ಆಂಕಾಲಜಿ, ಪೀಡಿಯಾಟ್ರಿಕ್‌ ಆಂಕಾಲಜಿ, ಆಂಕೊ-ಪ್ಲಾಸ್ಟಿಕ್‌ ಸರ್ಜರಿ ಹಾಗೂ ಪೈನ್‌ ಆ್ಯಂಡ್‌ ಪಾಲಿಯೇಟಿವ್‌ ಕೇರ್‌ (ನೋವು ಮತ್ತು ಉಪಶಮನ ಆರೈಕೆ) ಸೇವೆಗಳು ಸೇರಿದಂತೆ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದ ಸಮಗ್ರ ಸೇವೆಗಳು ಇಲ್ಲಿ ದೊರೆಯಲಿವೆ. ಟ್ರೂಬೀಮ್‌ ರೇಡಿಯೋಥೆರಪಿ ಸಿಸ್ಟಮ್‌ ಈ ನೂತನ ಸಮಗ್ರ ಕ್ಯಾನ್ಸರ್‌ ಆರೈಕೆಯು ಕೇಂದ್ರದ ಹೆಗ್ಗಳಿಕೆಯಾಗಿದೆ ಎಂದರು.

ರೇಡಿಯೇಷನ್‌ ಆಂಕಾಲಜಿ ವಿಭಾಗದ  ಮುಖ್ಯಸ್ಥ ಡಾ. ಎಂ.ಎಸ್‌. ಅತಿಯಮಾನ್‌ ಮಾತನಾಡಿ, ಟ್ರೂಬೀಮ್‌ ರೇಡಿಯೊಥೆರಪಿ ಚಿಕಿತ್ಸೆಯು ಕ್ಯಾನ್ಸರ್‌ ಚಿಕಿತ್ಸೆಯನ್ನು ಇನ್ನಷ್ಟು ನಿಖರವಾಗಿ ತಿಳಿಸುತ್ತದೆ ಎಂದರು.

 ಉಪ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್‌ ಮಡಿ ಮಾತನಾಡಿ, ಉದ್ಘಾಟನಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಸ್ಪೀಕರ್‌ ಯು.ಟಿ. ಖಾದರ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಶಾಸಕರಾದ ವೇದವ್ಯಾಸ ಕಾಮತ್‌, ಡಾ. ಭರತ್‌ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಭಾಗವಹಿಸುವರು. ಮಾಹೆ ಪ್ರೊ ಚಾನ್ಸಲರ್‌ ಎಚ್‌.ಎಸ್‌. ಬಲ್ಲಾಳ್‌ ಅಧ್ಯಕ್ಷತೆ ವಹಿಸುವರು ಎಂದರು. ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯ ವ್ಯವಸ್ಥಾಪಕ ರವಿರಾಜ್‌ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT