ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ

Last Updated 5 ಫೆಬ್ರುವರಿ 2020, 7:23 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2019ನೇ ಸಾಲಿನ ಗೌರವ ಪ್ರಶಸ್ತಿಯನ್ನು ಮಂಗಳೂರಿನ ಗೋಕುಲ್ ದಾಸ್ ಪ್ರಭು (ಕೊಂಕಣಿ ಸಾಹಿತ್ಯ), ಕುಂದಾಪುರದ ಆರ್ಗೋಡು ಮೋಹನದಾಸ್ ಶೆಣೈ (ಕೊಂಕಣಿ ಕಲೆ), ಕಾರವಾರದ ಕಿನ್ನರ ಗ್ರಾಮದ ವಿಷ್ಣು ಶಾಬು ರಾಣೆ (ಕೊಂಕಣಿ ಜಾನಪದ) ಅವರಿಗೆ ಘೋಷಿಸಿದೆ.

ಇದೇ 22 ಮತ್ತು 23 ರಂದು ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನ ಶಿಕ್ಷಣ ಸಮೂಹ ಸಂಸ್ಥೆಯ ಸಭಾಂಗಣದಲ್ಲಿ ಅಕಾಡೆಮಿಯ ಬೆಳ್ಳಿಹಬ್ಬ ಸಮಾರಂಭ ನಡೆಯಲಿದ್ದು, 23ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡುವರು ಎಂದು ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಂಗಳೂರಿನ ವೆಂಕಟೇಶ್ ನಾಯಕ್ ಅವರ ‘ವಾಟೇ ವಯಲೆಂ ರಗತ’ಕವನ ಸಂಕಲನ, ಪಿಯುಸ್ ಪಿದಲಿಸ್ ಪಿಂಟೊ ಅವರ ‘ಕೆನರಾಂತ್ ಪಾದ್ರೊವಾದೊ ಅನಿ ಪ್ರೊಪಗಾಂದಾಚೊ ವಿವಾದ್’ಅಧ್ಯಯನ ಕೃತಿ, ಕ್ಲೆರೆನ್ಸ್ ಡೊನಾಲ್ಡ್ ಪಿಂಟೊ ಅವರ ‘ಕಥಾಮೃತ್’ ಸಣ್ಣಕತೆ ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT