ಶುಕ್ರವಾರ, ಆಗಸ್ಟ್ 6, 2021
25 °C
ತಲಪಾಡಿ ಗಡಿಯಲ್ಲೇ 3 ಸಹಾಯ ಕೇಂದ್ರ ತೆರೆಯಲು ಸಚಿವ ಕೋಟ ಆದೇಶ

ಕಾಸರಗೋಡು–ಮಂಗಳೂರು ನಡುವಣ ಸಂಚಾರದ ಪಾಸ್ ವಿತರಣೆ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Dakshina kannada Kasaragod border

ಮಂಗಳೂರು: ದೈನಂದಿನ ಚಟುವಟಿಕೆಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬರಲು ಕಾಸರಗೋಡು ಕನ್ನಡಿಗರಿಗೆ ತುರ್ತು ಪಾಸ್ ನೀಡುವುದಕ್ಕಾಗಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಗಡಿ ತಲಪಾಡಿಯಲ್ಲಿ  3 ಸಹಾಯ ಕೇಂದ್ರಗಳನ್ನು (ಹೆಲ್ಪ್ ‌ಡೆಸ್ಕ್) ಸ್ಥಾಪಿಸಿ, ಅಲ್ಲಿಯೇ ಪಾಸ್ ವಿತರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ. 

ಮತ್ತೆ ಸಮಸ್ಯೆಗಳು ಏನಾದರೂ ಬಂದರೆ ತನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಕಾಸರಗೋಡು ಕನ್ನಡಿಗರಿಗೆ ಅವರು ಮನವಿ ಮಾಡಿದ್ದಾರೆ.

2 ಜಿಲ್ಲೆಗಳ ನಡುವೆ ನಿತ್ಯ ಓಡಾಡುವವರಿಗೆ ಸಮರ್ಪಕ ಪಾಸ್ ವಿತರಣೆ ಆಗದೆ ಗೊಂದಲ ಏರ್ಪಟ್ಟಿತ್ತು. ಕಾಸರಗೋಡು ಕಡೆಯಿಂದ ಸುಮಾರು 2000ಕ್ಕೂ ಹೆಚ್ಚು ಅರ್ಜಿಗಳು ಪಾಸ್‌ಗಾಗಿ ಬಂದಿದ್ದು, ಭಾನುವಾರ ತನಕ 400 ಪಾಸ್‌ಗಳ ವಿತರಣೆಯಾಗಿವೆ. ಉಳಿದ ಅರ್ಜಿಗಳು ಆಧಾರ್ ಕಾರ್ಡ್ ಸಹಿತ ಸಮರ್ಪಕ ದಾಖಲೆಗಳು ಇಲ್ಲವೆಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಪಾಸ್ ವಿತರಣೆಯನ್ನು ಸ್ಥಗಿತಗೊಳಿಸಿತ್ತು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು