ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟೆಕಾರು ಬ್ಯಾಂಕ್ ಕಾರ್ಯ ಶ್ಲಾಘನೀಯ: ಚಂದ್ರಶೇಖರ್

Published 25 ಆಗಸ್ಟ್ 2024, 14:03 IST
Last Updated 25 ಆಗಸ್ಟ್ 2024, 14:03 IST
ಅಕ್ಷರ ಗಾತ್ರ

ಉಳ್ಳಾಲ: ಕೋಟೆಕಾರು ಬ್ಯಾಂಕ್ ರೈತರನ್ನು ಪ್ರೋತ್ಸಾಹಿಸುವ ಜತೆಗೆ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದ ಮೂಲಕ ಗುರುತಿಸುತ್ತಿರುವುದು ಶ್ಲಾಘನೀಯ ಎಂದು ದೇಯಿ ಬೈದಿತಿ ಕೋಟಿ ಚೆನ್ನಯರ ಮೂಲಕ್ಷೇತ್ರ ಗೆಜ್ಜೆಗಿರಿಯ ಮೊಕ್ತೇಸರ ಚಂದ್ರಶೇಖರ್ ಉಚ್ಚಿಲ್ ಹೇಳಿದರು.

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಕೋಟೆಕಾರು ಬೀರಿ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆದ ಭತ್ತ ಕೃಷಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ಭತ್ತ ಕೃಷಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ಎಕರೆಗೆ ₹5 ಸಾವಿರ ಸಹಾಯಧನ ವಿತರಿಸುತ್ತಿದ್ದು, ಮೈಲುತುತ್ತವನ್ನು ಕಡಿಮೆ ದರದಲ್ಲಿ ವಿತರಿಸಲಾಗುತ್ತಿದೆ. ಅಡಿಕೆ ಬೆಳೆಯುವ ರೈತರಿಗೆ ಉಚಿತವಾಗಿ ಸುಣ್ಣ ನೀಡುವ ಯೋಜನೆಗೆ ಚಾಲನೆ ನೀಡಿದೆ. ಕೋಟೆಕಾರು ಬೀರಿಯಲ್ಲಿ ಕೆ.ಸುಬ್ಬಣ್ಣಯ್ಯ ಸ್ಮಾರಕ ಕೋಟೆಕಾರು ಸಹಕಾರ ಸೌಧವನ್ನು ಸೆ.15ರಂದು ಉದ್ಘಾಟಿಸಲಾಗುವುದು ಎಂದರು.

ಪ್ರಮುಖರಾದ ರಮೇಶ್ ಶೆಟ್ಟಿ ಬೋಳಿಯಾರು, ಎಂ.ಎ.ಮಹಮ್ಮದ್ ಬಶೀರ್, ವಿನಯ ಕುಮಾರ್ ನಾಯ್ಕ್, ಹರ್ಷರಾಜ್ ಮುದ್ಯ, ಲತಾ, ಕೆ.ಬಿ.ಅಬುಸಾಲಿ, ಹರ್ಷವರ್ಧನ್ ಉಳ್ಳಾಲ್, ಗಂಗಾಧರ್ ಯು., ಕೃಷ್ಣಪ್ಪ ಸಾಲ್ಯಾನ್, ಉದಯಕುಮಾರ್ ಶೆಟ್ಟಿ, ಅರುಣ್ ಕುಮಾರ್ ಯು., ರಾಘವ ಆರ್.ಉಚ್ಚಿಲ್, ರಾಘವ ಸಿ.ಉಚ್ಚಿಲ್, ಪದ್ಮಾವತಿ ಎಸ್.ಶೆಟ್ಟಿ, ಸುರೇಖಾ ಚಂದ್ರಹಾಸ್, ಬಾಬು ನಾಯ್ಕ, ಕಿರಣ್ ಕುಮಾರ್ ಶೆಟ್ಟಿ, ಲೋಕಯ್ಯ ಪನೀರ್, ಸುರೇಖಾ ಚಂದ್ರಹಾಸ್ ಭಾಗವಹಿಸಿದ್ದರು.

ಸಂತೋಷ್ ಕುಮಾರ್ ಶೆಟ್ಟಿ ನಿರೂಪಿಸಿದರು. ಅರುಣ್ ತೊಕ್ಕೊಟ್ಟು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT