ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋಟಿ ಚೆನ್ನಯ’ ಕಂಬಳಕ್ಕೆ ಕರೆ ಮುಹೂರ್ತ

Published 28 ಡಿಸೆಂಬರ್ 2023, 12:59 IST
Last Updated 28 ಡಿಸೆಂಬರ್ 2023, 12:59 IST
ಅಕ್ಷರ ಗಾತ್ರ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ಜ.27, 28ರಂದು ನಡೆಯಲಿರುವ ಐತಿಹಾಸಿಕ ಪುತ್ತೂರು ಕೋಟಿ ಚೆನ್ನಯ ಹೊನಲು ಬೆಳಕಿನ ಜೋಡುಕರೆ ಕಂಬಳದ ಕರೆ ಮುಹೂರ್ತ ಗುರುವಾರ ನಡೆಯಿತು.

ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಉಪಾಧ್ಯಕ್ಷರಾದ ನಿರಂಜನ ರೈ ಮಠಂತಬೆಟ್ಟು, ಶಿವರಾಮ ಆಳ್ವ, ಕೃಷ್ಣಪ್ರಸಾದ್ ಆಳ್ವ, ಜಿನ್ನಪ್ಪ ಗೌಡ ಮುರ, ಜೋಕಿಂ ಡಿಸೋಜ, ಸುದರ್ಶನ್ ನಾಯ್ಕ್‌ ಕಂಪ, ಶಶಿಕಿರಣ್ ರೈ ನೂಜಿಬೈಲು, ಚಂದ್ರಹಾಸ ರೈ ಕೈಕಾರ, ಕಿರಣ್ ಡಿಸೋಜ, ರೋಶನ್ ರೈ ಬನ್ನೂರು, ಖಜಾಂಜಿ ಈಶ್ವರ ಭಟ್ ಪಂಜಿಗುಡ್ಡೆ, ಜತೆ ಕಾರ್ಯದರ್ಶಿ ಪ್ರೇಮಾನಂದ ನಾಯ್ಕ್‌ ಸಮ್ಮುಖದಲ್ಲಿ ಕರೆಮುಹೂರ್ತ ನೆರವೇರಿಸಿದರು.

ಕಂಬಳ ಸಮಿತಿಯ ಪ್ರಮುಖರಾದ ಸುದೇಶ್ ಚಿಕ್ಕಪುತ್ತೂರು, ವಿಕ್ರಂ ಶೆಟ್ಟಿ ಅಂತರ, ಯೋಗೀಶ್ ಸಾಮಾನಿ ಕೊಂಡಿಂಬಾಡಿ, ಪ್ರವೀಣ್‌ಕುಮಾರ್ ಶೆಟ್ಟಿ ಅಳಿಕೆ, ಮಂಜುನಾಥ ಗೌಡ ತೆಂಕಿಲ, ಪ್ರಶಾಂತ್ ಮುರ, ರಾಮ ನಾಯ್ಕ್ ಪಾಣಾಜೆ, ದಾಮೋದರ್ ನಲ್ಕೆ, ಶಿವಪ್ರಸಾದ್ ರೈ ಮಠಂತಬೆಟ್ಟು, ಶಶಿಕುಮಾರ್ ನೆಲ್ಲಿಕಟ್ಟೆ, ರಂಜಿತ್ ಬಂಗೇರ ಭಾಗವಹಿಸಿದ್ದರು.

ಪುತ್ತೂರಿನ ಮಹಾಲಿಂಗೇಶ್ವರ ದೇವಳ ಮುಂಭಾಗದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕರೆ ಮುಹೂರ್ತ ನೆರವೇರಿಸಿದರು
ಪುತ್ತೂರಿನ ಮಹಾಲಿಂಗೇಶ್ವರ ದೇವಳ ಮುಂಭಾಗದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕರೆ ಮುಹೂರ್ತ ನೆರವೇರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT