ಭಾನುವಾರ, ಜೂನ್ 26, 2022
28 °C

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ‌ ಸಂಸ್ಕಾರ ಸೇವೆ ಸ್ಥಗಿತ: ಭಕ್ತರಿಂದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ: ಸರ್ಕಾರದ ಆದೇಶ ಪಾಲನೆಯ ಕಾರಣಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಬುಧವಾರ ಸರ್ಪ‌ ಸಂಸ್ಕಾರ ಸೇವೆಯನ್ನು ಬಂದ್ ಮಾಡಲಾಗಿದೆ.

ಈ‌ ಮಾಹಿತಿ‌ ಅರಿಯದೆ ದೂರದ ಊರುಗಳಿಂದ ಪ್ರಸಿದ್ಧ ನಾಗಕ್ಷೇತ್ರವಾಗಿರುವ ಕುಕ್ಕೆಗೆ ಬಂದಿರುವ ಭಕ್ತರು, ಆಡಳಿತ‌ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. 

'ಸರ್ಪ ಸಂಸ್ಕಾರ ನಡೆಸಲು ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬಂದಿದ್ದೆವು. 2-3 ತಿಂಗಳುಗಳ ಹಿಂದೆ ಸರ್ಪ ಸಂಸ್ಕಾರ ಸೇವೆಯನ್ನು ಬುಕ್ ಮಾಡಲಾಗಿತ್ತು. ನಮಗೆ‌ ನೀಡಿದ್ದ  ದಿನಾಂಕಕ್ಕೆ ಅನುಗುಣವಾಗಿ ಬುಧವಾರ ದೇವಾಲಯಕ್ಕೆ ಬಂದಿದ್ದೇವೆ. ದೂರದ ಊರುಗಳಿಂದ‌‌ ಪ್ರಯಾಣ ಮಾಡಿ ಬಂದಿರುವ‌ ನಮಗೆ, ಈಗ‌ ಸೇವೆ ಲಭ್ಯ ಇಲ್ಲ ಎಂಬ ಮಾಹಿತಿಯನ್ನು‌ ನೀಡುತ್ತಿದ್ದಾರೆ' ಎಂದು ಭಕ್ತರು ದೂರಿದರು. 

'ಸರ್ಕಾರದ ಆದೇಶ‌‌ ಪಾಲಿಸುವುದು ಅನಿವಾರ್ಯ. ಸರ್ಪ ಸಂಸ್ಕಾರ‌ ಸೇವೆ ಎರಡು‌ ದಿನ ನಡೆಯುತ್ತದೆ. ಗುರುವಾರಕ್ಕೆ ಸೇವೆಗೆ ಅವಕಾಶ ಇಲ್ಲದ ಕಾರಣ ಈ ಸೇವೆಯನ್ನು ಬುಧವಾರ ಬಂದ್ ಮಾಡಲಾಗಿದೆ' ಎಂದು ದೇವಾಲಯದ ಆಡಳಿತ ಮಂಡಳಿ ಪ್ರಮುಖರು ಸ್ಪಷ್ಟಪಡಿಸಿದರು. 

ದೇವಾಲಯದಲ್ಲಿ ಇನ್ನುಳಿದ ಸೇವೆಗಳು ನಡೆಯುತ್ತಿವೆ. ಸರ್ಪ ಸಂಸ್ಕಾರ ಸೇವೆ ಸಲ್ಲಿಸಲು ಬೇರೆ ಬೇರೆ ಊರುಗಳಿಂದ ನೂರಾರು ಜನರು ಬಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು