ಬುಧವಾರ, ಮೇ 18, 2022
23 °C

ಲಗೇಜ್‌ ವಿಳಂಬ: ಪ್ರಯಾಣಿಕರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸೈಸ್‌ಜೆಟ್‌ ವಿಮಾನದ ಮೂಲಕ ದುಬೈನಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಲಗೇಜ್‌ಗಳು ಸಿಗುವುದು ವಿಳಂಬವಾಗಿದ್ದು, ಹಲವು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮಂಗಳೂರಿಗೆ ಬಂದಿಳಿಯುತ್ತಲೇ ಸ್ಪೈಸ್‌ಜೆಟ್‌ನ ಸಿಬ್ಬಂದಿ ಪ್ರಯಾಣಿಕರ ಬೋರ್ಡಿಂಗ್ ಪಾಸ್‌ ಕೇಳಿದರು. ನಂತರ ಕೆಲ ಪ್ರಯಾಣಿಕರು ಮುಂದೆ ಹೋಗಲು ಅನುಮತಿ ನೀಡಿದರು. ಆದರೆ, ಇನ್ನು ಕೆಲವು ಪ್ರಯಾಣಿಕರ ಲಗೇಜ್‌ಗಳು ಬಂದಿಲ್ಲ. ವಿಮಾನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಲಗೇಜ್‌ಗಳು ಇರುವುದರಿಂದ ನಂತರದಲ್ಲಿ ಬರಲಿವೆ ಎಂಬ ಮಾಹಿತಿ ನೀಡಿದರು’ ಎಂದು ಸಂತೋಷ್‌ ನೊರೊನ್ಹ ತಿಳಿಸಿದರು.

ಇಮಿಗ್ರೇಷನ್‌ ಪ್ರಕ್ರಿಯೆ ಮುಗಿಸಿ, ಸ್ಪೈಸ್‌ಜೆಟ್‌ ಕೌಂಟರ್‌ಗೆ ಬಂದಾಗ, ನಮ್ಮ ಲಗೇಜ್‌ಗಳು ಭಾನುವಾರ ಬರಲಿವೆ ಎಂದು ಅಲ್ಲಿನ ಸಿಬ್ಬಂದಿ ಮಾಹಿತಿ ನೀಡಿದರು ಎಂದಿರುವ ಅವರು, ಪ್ರತಿಯೊಬ್ಬ ಪ್ರಯಾಣಿಕರಿಗೂ 30 ಕೆ.ಜಿ. ಲಗೇಜ್‌ ತೆಗೆದುಕೊಂಡು ಹೋಗಲು ಅನುಮತಿ ಇದೆ. ಹಾಗಾದರೆ, ವಿಮಾನದಲ್ಲಿ ಹೆಚ್ಚಿನ ಲಗೇಜ್‌ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ವಿಮಾನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಲಗೇಜ್‌ಗಳನ್ನು ಮತ್ತೊಂದು ವಿಮಾನದಲ್ಲಿ ತರಿಸಲಾಗುತ್ತಿದೆ. ಹೀಗಾಗಿ ಕೆಲವು ಪ್ರಯಾಣಿಕರ ಲಗೇಜ್‌ಗಳನ್ನು ಭಾನುವಾರ ತಲುಪಿಸಲಾಗುವುದು ಎಂದು ಸ್ಪೈಸ್‌ಜೆಟ್‌ನ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು