ಉಳ್ಳಾಲ (ದಕ್ಷಿಣ ಕನ್ನಡ): ಸ್ಕೂಟರ್ಗೆ ಲಾರಿ ಡಿಕ್ಕಿಯಾಗಿ ಸ್ವಿಗ್ಗಿ ಡೆಲಿವರಿ ಬಾಯ್ ಮೃತಪಟ್ಟಿರುವ ದುರಂತ ರಾಷ್ಟ್ರೀಯ ಹೆದ್ದಾರಿ 66ರ ಸಂಕೊಳಿಗೆ ಸಮೀಪ ಸಂಭವಿಸಿದೆ.

ದೇರಳಕಟ್ಟೆ ಪಾನೀರು ನಿವಾಸಿ ಉಮ್ಮರ್ ಫಾರುಕ್ ಯಾನೆ ಅಝರ್ (31) ಮೃತಪಟ್ಟವರು. ಅವಿವಾಹಿತರಾಗಿರುವ ಅವರು ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಡಿ.31ರ ತಡರಾತ್ರಿ ಡೆಲಿವರಿ ತಲುಪಿಸಿ ತಲಪಾಡಿಯಿಂದ ತೊಕ್ಕೊಟ್ಟು ಕಡೆಗೆ ವಾಪಸ್ಸಾಗುವ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ನಂತರ, ರಸ್ತೆಗೆ ಬಿದ್ದ ಅಝರ್ ಅವರ ಮೇಲೆ, ಲಾರಿಯ ಹಿಂಬದಿ ಚಕ್ರಗಳು ಹರಿದಿವೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.