ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಮಣ್ಣಿನಲ್ಲಿ ಕನ್ನಡ ಶಾಲೆ ಉಳಿಸುವ ಕೆಲಸವಾಗಲಿ: ಹರಿಕೃಷ್ಣ ಪುನರೂರು

Published 27 ಡಿಸೆಂಬರ್ 2023, 13:41 IST
Last Updated 27 ಡಿಸೆಂಬರ್ 2023, 13:41 IST
ಅಕ್ಷರ ಗಾತ್ರ

ಮೂಲ್ಕಿ: ‘ತುಳುನಾಡಿನ ಮಣ್ಣಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು ಕನ್ನಡಾಭಿಮಾನಿಗಳು, ಸಂಘ ಸಂಸ್ಥೆಗಳು ಒಂದಾಗಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಕಾರ್ನಾಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಮೂಲ್ಕಿ ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

’ಕನ್ನಡ ಶಾಲೆಗಳಿಗೆ ಶಿಕ್ಷಕರಿಲ್ಲದೆ, ಮೂಲಸೌಕರ್ಯ ಇಲ್ಲದೆ, ವಿದ್ಯಾರ್ಥಿಗಳಿಲ್ಲದೆ ಶಾಲೆ ಮುಚ್ಚುವ ಪರಿಸ್ಥಿತಿ ಇದೆ’  ಎಂದರು. 

ಗಣೇಶ್ ಅಮೀನ್ ಸಂಕಮಾರ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ‘ಮೂಲ್ಕಿ ತಾಲ್ಲೂಕಿನ ಸಮಗ್ರ ಇತಿಹಾಸವು ಅಧ್ಯಯನ ಯೋಗ್ಯವಾಗಿದೆ. ಸಂಶೋಧನಾ ಮಾರ್ಗದರ್ಶನ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ ಮತ್ತು ಸಾಹಿತ್ಯ ಕೃಷಿ ಮಾಡಲು ವಿಫುಲ ಅವಕಾಶ ಇದೆ’ ಎಂದರು.

ತಹಶೀಲ್ದಾರ್ ದಿಲೀಪ್ ಕೊರ್ಡೆಕರ್ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಮಿಥುನ್ ಕೊಡೆತ್ತೂರು, ಬಪ್ಪನಾಡು ದೇವಳದ ಮನೋಹರ ಶೆಟ್ಟಿ, ಮುರಳಿ ಮೋಹನ ಚೂಂತಾರು, ಮೋಹನ್ ದಾಸ್ ಸುರತ್ಕಲ್, ಸರ್ವೋತ್ತಮ ಅಂಚನ್, ಅಶೋಕ್‌ಕುಮಾರ ಶೆಟ್ಟಿ, ನಿಶಾಂತ್ ಶೆಟ್ಟಿ ಕಿಲೆಂಜೂರು, ಅಶೋಕ್ ಸುವರ್ಣ, ಗುರುಶಾಂತಪ್ಪ, ಡಾ.ವಾಸುದೇವ ಬೆಳ್ಳೆ, ಇಂದು, ಮಂಜುನಾಥ ರೇವಣ್ಕರ್, ಸುನಿಲ್ ಆಳ್ವ, ದೇವಪ್ರಸಾದ್ ಪುನರೂರು, ವೆಂಕಟೇಶ್ ಹೆಬ್ಬಾರ್ ಮತ್ತಿತರರು ಇದ್ದರು. ಅರ್ಪಿತಾ ಶೆಟ್ಟಿ ನಿರೂಪಿಸಿದರು.

ವಿವಿಧ ಗೋಷ್ಠಿಗಳು ನಡೆದವು. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರು ಕಾರ್ಯಕ್ರಮದಲ್ಲಿ ದಿ. ಡಾ.ಶಿಮಂತೂರು ನಾರಾಯಣ ಶೆಟ್ಟಿ, ಗಣೇಶ್ ಕೊಲೆಕಾಡಿ, ಶ್ರೀಧರ್ ಡಿ.ಎಸ್. ಅವರ ಸಾಧನೆಯನ್ನು ಭಾವಗೀತೆ, ಯಕ್ಷಗಾನ ಭಾಗವತಿಕೆಯಲ್ಲಿ ವಿಶಿಷ್ಠವಾಗಿ ಪ್ರದರ್ಶಿಸಲಾಯಿತು. ಪ್ರಕಾಶ್ ಸುವರ್ಣ ಮೂಲ್ಕಿ, ಸಂಜೀವ ದೇವಾಡಿಗ, ಭುಜಂಗ ಕವತ್ತಾರು ಕಾರ್ಯಕ್ರಮ ನಡೆಸಿಕೊಟ್ಟರು. ಅನಿಕೇತ ಉಡುಪ ಪರಿಚಯಿಸಿದರು. ನರೇಂದ್ರ, ಮಧವ ಕೆರೆಕಾಡು ನಿರೂಪಿಸಿದರು. ಮೂಲ್ಕಿ ಸರ್ಕಾರಿ ಶಾಲೆಗಳ ಅಳಿವು ಉಳಿವು ಬಗ್ಗೆ ವಿ.ಕೆ.ಯಾದವ್ ವಿಷಯ ಮಂಡಿಸಿದರು, ಗಂಗಾಧರ ಶೆಟ್ಟಿ ಬರ್ಕೆ, ಸಂಧ್ಯಾ ಹೆಗಡೆ, ಜಯಲಕ್ಷ್ಮೀ ಟಿ. ನಾಯಕ್, ಶಿಕ್ಷಣ ಇಲಾಖೆಯ ಸಿ.ಡಿ.ಜಯಣ್ಣ ಇದ್ದರು.

ರಘುನಾಥ ಕಾಮತ್ ನಿರೂಪಿಸಿದರು. ಕವಿ ಸಮಯದಲ್ಲಿ ಶಕುಂತಲಾ ಭಟ್, ವಿಲ್ಸನ್ ಕಟೀಲು, ದುರ್ಗಾಪ್ರಸಾದ ದಿವಾಣ, ರವೀಂದ್ರ ಪ್ರಭು, ಪುಷ್ಪರಾಕ್ ಚೌಟ ಭಾಗವಹಿಸಿದ್ದರು. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ವಾಮನ ಕರ್ಕೇರ, ಶ್ರೀಮಣಿ ಶೆಟ್ಟಿ, ವೈ.ಎನ್.ಸಾಲಿಯಾನ್, ಮೊಹಮ್ಮದ್ ಅಬೀಬುಲ್ಲಾ, ಉದಯ ಅಮೀನ್ ಮಟ್ಟು ಇದ್ದರು.

ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ

ಕಾರ್ನಾಡು ಗಾಂಧಿ ಮೈದಾನದಿಂದ ಭುವನೇಶ್ವರಿ ದೇವಿಯ ಮೆರವಣಿಗೆ ನಡೆಯಿತು.  ಕೆ.ಪಿ.ರಾವ್ ಪುಸ್ತಕಗಳನ್ನು ಉಚಿತವಾಗಿ ಮಕ್ಕಳಿಗೆ ಹಂಚಿದರು. ಸಮ್ಮೇಳನದಲ್ಲಿ ವಿವಿಧ ರೀತಿಯ ಪುಸ್ತಕ ಮಳಿಗೆಗಳು ಛಾಯಾಚಿತ್ರ ಪ್ರದರ್ಶನ ವಿವಿಧ ಇಲಾಖೆಗಳ ಮಾಹಿತಿ ವಿವಿಧ ಬಗೆಯ ತಿನಿಸುಗಳು ಉಡುಪುಗಳು ನರ್ಸರಿ ಮನೆ ಮದ್ದು ಹಪ್ಪಳ ಸಂಡಿಗೆ ಹೋಳಿಗೆ ಹೀಗೆ 30ಕ್ಕೂ ಮಳಿಗೆಗಳನ್ನು ತೆರೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT