ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ-ಉಡುಪಿ: ‘ಲೋಕಲ್’ ಅಭಿಯಾನದಲ್ಲಿ ಸ್ಮಾರ್ಟ್‌ಫೋನ್ ಫೆಸ್ಟ್

Last Updated 12 ಸೆಪ್ಟೆಂಬರ್ 2022, 11:32 IST
ಅಕ್ಷರ ಗಾತ್ರ

ಮಂಗಳೂರು: ಆನ್‌ಲೈನ್‌ನಲ್ಲಿ ಮೊಬೈಲ್ ಫೋನ್ ಮಾರಾಟದ ಭರಾಟೆಯಿಂದಾಗಿ ಸ್ಥಳೀಯ ಸಣ್ಣ ಮಳಿಗೆಯವರು ಸಂಕಷ್ಟ ಅನುಭವಿಸುತ್ತಿದ್ದು ಇದರಿಂದ ಚೇತರಿಸಿಕೊಳ್ಳುವ ಉದ್ದೇಶದಿಂದ ‘ವೋಕಲ್ ಫಾರ್ ಲೋಕಲ್’ ಅಭಿಯಾನದಲ್ಲಿ ಸ್ಮಾರ್ಟ್ಫೋನ್ ಫೆಸ್ಟ್ ಆಯೋಜಿಸಲಾಗಿದೆ ಎಂದು ಡಿಕುಮ್ರಾ (ದಕ್ಷಿಣ ಕನ್ನಡ ಉಡುಪಿ ಮೊಬೈಲ್ ಮಾರಾಟಗಾರರ ಸಂಘ) ತಿಳಿಸಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಗುರುದತ್ತ ಕಾಮತ್ ‘ಸೆಪ್ಟೆಂಬರ್ 10ರಂದು ಫೆಸ್ಟ್ ಆರಂಭವಾಗಿದ್ದು ಜನವರಿ 10ರ ವರೆಗೆ ಮುಂದುವರಿಯಲಿದೆ. ಎಲ್ಲ ಕಂಪೆನಿಯ ಸ್ಮಾರ್ಟ್ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಿದ್ದು ಟಿವಿಎಸ್ ಜುಪಿಟರ್ ವಾಹನ, ಎಲ್‌ಇಡಿ ಟಿವಿ, ಸ್ಮಾರ್ಟ್ ವಾಚ್, ತವಾ, ನೆಕ್‌ಬ್ಯಾಂಡ್, ಇಯರ್‌ಫೋನ್ ಮುಂತಾದ ಹತ್ತಾರು ಕೊಡುಗೆಗಳ ಕೂಪನ್ ನೀಡಲಾಗುವುದು ಎಂದರು.

ಕೊರೊನಾ ಹೊಡೆತದ ನಂತರ ಆನ್‌ಲೈನ್ ಖರೀದಿ ಹೆಚ್ಚಾಗಿರುವುದರಿಂದ ಸಣ್ಣ ಅಂಗಡಿ ಮಾಲೀಕರು ಮತ್ತು ಕೆಲಸದವರು ಕಂಗಾಲಾಗಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ ಜಿಲ್ಲೆಯಲ್ಲಿ 247 ಅಂಗಡಿಗಳು ಬಂದ್ ಆಗಿವೆ. ಹೀಗಾಗಿ ಈ ಯೋಜನೆಗೆ ಕೈಹಾಕಲಾಗಿದೆ. ಫೋನ್ ಖರೀದಿಗೆ ಸಾಲದ ನೆರವು ಕೂಡ ಲಭ್ಯ ಇದೆ’ ಎಂದು ಅವರು ವಿವರಿಸಿದರು.

ಸಂಘದ ಸ್ಥಾಪಕ ಅಧ್ಯಕ್ಷ ಸಲೀಂ, ಅಧ್ಯಕ್ಷ ಶೈಲೇಂದ್ರ ಸರಳಾಯ, ಉಪಾಧ್ಯಕ್ಷ ಮೊಹಮ್ಮದ್ ಅಜರುದ್ದೀನ್, ಸದಸ್ಯ ಇಮ್ತಿಯಾಜ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT