ಮಂಗಳವಾರ, ಜೂನ್ 28, 2022
21 °C
ಪನಾಮ ನೇಚರ್ ಫ್ರೆಶ್ ಸಂಸ್ಥೆಯ ಸಿಇಒ ಮಂಗಳೂರಿನ ವಿವೇಕ್‌ ರಾಜ್‌

ಲಾಕ್‌ಡೌನ್‌ ಸಂಕಷ್ಟದಲ್ಲಿ ಯುವ ಉದ್ಯಮಿ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಮಂಗಳೂರಿನ ಯುವ ಉದ್ಯಮಿ ಪನಾಮ ನೇಚರ್ ಫ್ರೆಶ್ ಸಂಸ್ಥೆಯ ಅಧ್ಯಕ್ಷ ವಿವೇಕ್ ರಾಜ್ ಪೂಜಾರಿ ಸಂಕಷ್ಟದಲ್ಲಿರುವ ಸಹಸ್ರಾರು ಮಂದಿಗೆ  ಬಡವರ ಪಾಲಿಗೆ ಕಣ್ಮಣಿ ಯಾಗಿದ್ದಾರೆ.

ಈ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿವೇಕ್ ರಾಜ್ ಪೂಜಾರಿ, ‘ಈ ಬಾರಿ 16,000 ಮಂದಿಗೆ ಊಟ,  4,350 ಕುಟುಂಬ ಸದಸ್ಯರಿಗೆ , ದಿನಗೂಲಿ ನೌಕರರಿಗೆ ಕಿಟ್ ನೀಡಿದ್ದು , ಜೊತೆಗೆ ಹಲವು ಬಡ ಕುಟುಂಬ ಗಳ ಆಸ್ಪತ್ರೆ ಚಿಕಿತ್ಸೆಯ ವೆಚ್ಚವನ್ನು ಸಹ ಪನಾಮ ಕಂಪನಿ ವತಿಯಿಂದ ಬರಿಸಿದ್ದೇನೆ. ನಾವು ದಿನಸಿ ನೀಡುವ ಕಿಟ್ ಒಂದು ಕುಟುಂಬಕ್ಕೆ 15 ದಿನ ಉಪಯೋಗಕ್ಕೆ ಬರಲಿದೆ. ಕಳೆದ ವರ್ಷದ ಕೋವಿಡ್‌ ಲಾಕ್‌ಡೌನ್‌  ಸಂಧರ್ಭ ಸುಮಾರು 14,000 ಮಂದಿಗೆ ಬೀದಿ ಬದಿ ಊಟ, 2000 ಮಂದಿಗೆ ಕಿಟ್ , 12 ಮಂದಿಗೆ ಮಾರಾಟಕ್ಕಾಗಿ ತಳ್ಳುಗಾಡಿ ತುಂಬಾ ತರಕಾರಿ , ಮತ್ತು 50  ಬಿಸಿಲು ದೊಡ್ಡ ಕೊಡೆಗಳನ್ನು ಉಚಿತವಾಗಿ ನೀಡಲಾಗಿದೆ. ಸಂಕಷ್ಟ ದಲ್ಲಿದ್ದವರಿಗೆ ತಮ್ಮ ಊರಿಗೆ ಹೋಗಲು ಆರ್ಥಿಕ ಸಹಾಯ ಮಾಡಲಾಗಿದೆ’ ಎಂದರು.

‘ಈ ಬಾರಿಯ ಲಾಕ್‌ಡೌನ್‌ ಸಂದರ್ಭ ಸರ್ಕಾರದಿಂದ ವ್ಯವಸ್ಥೆ ವಿಫಲ ವಾಗಿದೆ. ಕೆಲಸಗಾರರಿಗೆ ಸಂಚಾರಕ್ಕೆ ಬೇರೆ ವ್ಯವಸ್ಥೆ ಇಲ್ಲ. ಜೊತೆಗೆ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಜನರ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸಿವೆ. ಸಾರ್ವಜನಿಕರ ಸಂಕಷ್ಟವನ್ನು  ನಿರ್ಲಕ್ಷಿಸಿದೆ. ಸರ್ಕಾರಕ್ಕೆ ತೆರಿಗೆ ತುಂಬುವ ಉದ್ದಿಮೆದಾರರಿಗೂ ಉಪಯೋಗ ಆಗಿಲ್ಲ ಎಂದು ಖೇದ ವ್ಯಕ್ತ ಪಡಿಸಿದರು. ರಜಾಕ್ ಉಪಸ್ಥಿತರಿದ್ದರು.

‘ಹಣ್ಣು ತರಕಾರಿ ನೇರ ಖರೀದಿಗೆ ₹75 ಕೋಟಿ’

‘ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರು ತಾವು ಬೆಳೆದ ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿ ಇಲ್ಲದ್ದರಿಂದ, ಬೆಲೆ ಕುಸಿತ ಇತ್ಯಾದಿಗಳಿಂದ ಕೃಷಿಕರು  ಹಣ್ಣೂ, ಕರಕಾರಿ ಕೃಷಿ ಉತ್ಪನ್ನಗಳನ್ನು ಬೀದಿಗೆ ಸುರಿಯುವುದನ್ನು ನೋಡಿದ್ದೇನೆ. ರೈತರು ತಾವು ಬೆಳೆದ ಬೆಳೆದ ತರಕಾರಿ, ಹಣ್ಣುಗಳನ್ನು ಪನಾಮ ಕಂಪನಿ ಹೊಲದಿಂದಲೇ ಖರೀದಿ ಮಾಡಲಿದೆ . ₹75 ಕೋಟಿ ವೆಚ್ಚದಲ್ಲಿ ಕೃಷಿಕರು ಬೆಳೆದ ಉತ್ಪನ ಗಳನ್ನು ಖರೀದಿಸುವ ಯೋಜನೆಯನ್ನು ಕೈಗೊಂಡಿದ್ದೀನೆ.  ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು  ₹50 ಲಕ್ಷ ಮೊತ್ತವನ್ನು ಮೀಸಲಿಟ್ಟಿದ್ದೇನೆ  ಎಂದು ವಿವೇಕ್ ರಾಜ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು