ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಕೇಂದ್ರ ಈಗ ಕೋವಿಡ್‌ ವಾರ್‌ರೂಂ

ಸ್ಮಾರ್ಟ್‌ಸಿಟಿ ಯೋಜನೆಯ ಸಮನ್ವಯ ಕೇಂದ್ರ
Last Updated 8 ಮೇ 2021, 15:30 IST
ಅಕ್ಷರ ಗಾತ್ರ

ಮಂಗಳೂರು: ಸ್ಮಾರ್ಟ್‌ಸಿಟಿ ಅನುಷ್ಠಾನದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಮಂಗಳೂರು ಯೋಜನೆಯ ‘ಸಮನ್ವಯಿತ ಸಮಗ್ರ ನಿಯಂತ್ರಣ ಕೇಂದ್ರ’ (ಇಂಟಗ್ರೇಟೆಡ್‌ ಕಮಾಂಡ್‌ ಆಂಡ್‌ ಕಂಟ್ರೋಲ್‌ ಸೆಂಟರ್‌–ಐಸಿಸಿಸಿ)ಯನ್ನು ಕೋವಿಡ್‌ ನಿರ್ವಹಣೆಯಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಲು ‘ಕೋವಿಡ್‌ ವಾರ್‌ ರೂಂ’ ಆಗಿ ಪರಿವರ್ತಿಸಲಾಗಿದೆ.

‘ಕೋವಿಡ್‌ ವಾರ್‌ ರೂಂ’ ಸಹಾಯವಾಣಿ ಸಂಖ್ಯೆ 1077 ಆಗಿದ್ದು,‌ ವಿವಿಧ ಸೇವಾಕಾರ್ಯಗಳಿಗೆ ಡಿಜಿಟಲ್‌– ಇಂಟರ್‌ನೆಟ್‌ ವೇದಿಕೆಯಾಗಿಯೂ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕೋವಿಡ್‌ ವಿರುದ್ಧ ಸಮರ ಸಾರಿರುವ ಸರ್ಕಾರದ ವಿವಿಧ ಇಲಾಖೆಗಳು, ವಿವಿಧ ಸ್ಥಳಗಳು, ಬಹುಹಂತದ ನಿಯಂತ್ರಣ ಕ್ರಮಗಳ ‘ಸಮನ್ವಯ ಕೇಂದ್ರ’ವಾಗಿ ಇದು ಕಾರ್ಯ ನಿರ್ವಹಿಸುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ತಿಳಿಸಿದರು.

‘ಕೋವಿಡ್‌ ವಾರ್‌ ರೂಂ’ ಇಲಾಖೆಗಳ ನಡುವೆ ಮಾಹಿತಿ ಸಂವಹನ ಸಮನ್ವಯ ಸಾಧಿಸುವುದರ ಜತೆಗೆ, ಕೋವಿಡ್‌ ಸಂಬಂಧಿಸಿದ ದತ್ತಾಂಶ ಸಂಗ್ರಹ, ನಿರೀಕ್ಷಣೆಗೆ ಮಾಧ್ಯಮವಾಗಲಿದೆ. ದುರಂತ ನಿರ್ವಹಣೆ ಮತ್ತು ತುರ್ತು ಸ್ಪಂದನೆ ವಿಭಾಗದ ಮೂಲಕ ಕೋವಿಡ್‌ ಪಿಡುಗಿನ ನಿರ್ವಹಣೆ ನಡೆಯಲಿದೆ. ಅಂಕಿ–ಅಂಶ,ಮಾಹಿತಿ ಸಂಗ್ರಹ, ನಿರೀಕ್ಷಣೆ, ಕ್ರೋಡೀಕರಣ, ಸಕಾಲಿಕ ವರದಿ ಸಿದ್ಧಪಡಿಸುವುದು ಇತ್ಯಾದಿಗಳಿಗೆ ಐಸಿಸಿ ಕೇಂದ್ರ ವೇದಿಕೆಯಾಗಲಿದೆ.

‘ಕೋವಿಡ್‌ ವಾರ್‌ ರೂಂ’ ಅನ್ನು ಬಳಸಿ ವೈದ್ಯರು, ಆರೋಗ್ಯ ಇಲಾಖೆ ತಜ್ಞರು ಟೆಲಿಮೆಡಿಸಿನ್‌ ಮೂಲಕ ಚಿಕಿತ್ಸೆ, ಶುಶ್ರೂಷೆ ನಡೆಸಲು ಸಾಧ್ಯವಾಗಲಿದೆ. ಮಹಾನಗರ ವ್ಯಾಪ್ತಿಯ ಜನರಿಗೆ, ಮನೆಗಳಲ್ಲಿ ಮತ್ತು ಇತರೆಡೆ ಕ್ವಾರಂಟೈನ್‌, ಸ್ವಯಂ ಕ್ವಾರಂಟೈನ್‌ ಆದವರು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ಬಾಧಿತರು, ಇತರರಿಗೆ ಟೆಲಿಮೆಡಿಸಿನ್‌ ವಿಧಾನದಲ್ಲಿ ಶುಶ್ರೂಷೆ, ತಪಾಸಣೆ, ಚಿಕಿತ್ಸಾ ಕಾರ್ಯ ನಡೆಸಲು ಸಾಧ್ಯವಾಗಲಿದೆ.

ಕೋವಿಡ್‌ ಆ್ಯಪ್‌: ಕೋವಿಡ್‌ ವಾರ್‌ರೂಂ ಆ್ಯಪ್‌ ಡೌನ್‌ಲೋಡ್‌ ಮಾಡಿದರೆ, ಲಭ್ಯವಿರುವ ಆಸ್ಪತ್ರೆ, ವೆಂಟಿಲೇಟರ್‌, ಆಮ್ಲಜನಕ ಸಹಿತ ಹಾಸಿಗೆಗಳು, ಇತರ ಚಿಕಿತ್ಸಾ ಕಾರ್ಯಗಳು, ಔಷಧಿ ಮತ್ತಿತರ ಮಾಹಿತಿಗಳು ಸ್ಮಾರ್ಟ್‌ಫೋನ್‌ ಮೂಲಕ ಲಭಿಸಲಿವೆ. ಇದನ್ನು ಬಳಸಿ ಪ್ರತಿಕ್ರಿಯಿಸಲು ಸಾರ್ವಜನಿಕರೂ ಇದರಲ್ಲಿ ಅವಕಾಶ ಇದೆ. ಸ್ಮಾರ್ಟ್‌ಸಿಟಿ ಐಸಿಸಿಕೇಂದ್ರದಿಂದ ಕೋವಿಡ್‌ ಬಾಧಿತರು, ಕೋವಿಡ್‌ ಸಂಬಂಧಿತ ಸಂದರ್ಭದಲ್ಲಿ ಜನರ ಬಳಕೆಗಾಗಿ ಹೊಸ ಆ್ಯಪ್‌ ಸಜ್ಜಾಗುತ್ತಿದೆ. 2 ದಿನಗಳಲ್ಲಿ ಲಭ್ಯವಾಗಲಿದೆ ಎಂದುಪಾಲಿಕೆ ಆಯುಕ್ತ ಅಕ್ಷಯ ಶ್ರೀಧರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT