ಸೋಮವಾರ, ಜನವರಿ 20, 2020
17 °C

ಕುಕ್ಕೆಗೆ ಸಂಸದೆ ಸುಮಲತಾ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭಾನುವಾರ ಮಂಡ್ಯ ಸಂಸದೆ ಸುಮಲತಾ ಹಾಗೂ ಪುತ್ರ ಅಭಿಷೇಕ್ ಗೌಡ ಭೇಟಿ ನೀಡಿ ದೇವರ ದರ್ಶನ ಹಾಗೂ ವಿಶೇಷ ಸೇವೆಗಳನ್ನು ಸಲ್ಲಿಸಿದರು.

ಬೆಳಿಗ್ಗೆ ದೇಗುಲಕ್ಕೆ ಆಗಮಿಸಿದ ಅವರು  ಆಶ್ಲೇಷಬಲಿ, ನಾಗಪ್ರತಿಷ್ಠೆ, ಪವಮಾನ ಅಭಿಷೇಕ, ಶೇಷ ಸೇವೆ ನೆರವೇರಿಸಿದರು. ಹೊಸೊಳಿಗಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಬಳಿಕ ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ತೆರಳಿ ಅಲ್ಲಿ ಆಶ್ಲೇಷ ಸೇವೆ ನೆರವೇರಿಸಿಕೊಂಡರು. ಅವರ ಭೇಟಿ ಖಾಸಗಿ ಹಿನ್ನಲೆಯಲ್ಲಿ ಭೇಟಿ ವೇಳೆ ಅವರು ಪೊಟೊ ತೆಗೆಸಿಕೊಳ್ಳಲು ನಿರಾಕರಿಸಿದರು. ಭೇಟಿ ವೇಳೆ ದೇಗುಲದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಬೀಶ ಉಪಸ್ಥಿತರಿದ್ದರು.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು