ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನಲ್ಲಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಅಪರಿಚಿತ ಯುವಕರ ವಿರುದ್ಧ ಪ್ರಕರಣ

Last Updated 29 ಮೇ 2022, 9:43 IST
ಅಕ್ಷರ ಗಾತ್ರ

ಮಂಗಳೂರು: ನಗರದ ಹೊರವಲಯದ ಕಣ್ಣೂರಿನಲ್ಲಿ ಮೇ 27 ರಂದು ನಡೆದ ಎಸ್ ಡಿಪಿಐ ಸಮಾವೇಶದ ವೇಳೆ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗೆ ನಿಂದಿಸಿ, ವಾಹನ ಹಾಯಿಸಲು ಯತ್ನಿಸಿದ ಕುರಿತು ಅಪರಿಚಿತ ಆರೋಪಿಗಳ ಕುರಿತು ಕಂಕನಾಡಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ಪೂರ್ವ ಪೊಲೀಸ್ ಠಾಣೆ ಎಎಸ್ ಐ ಚಂದ್ರಶೇಖರ ಬಿ. ದೂರು ಸಲ್ಲಿಸಿದ್ದಾರೆ. ಕೆಟಿಎಂ ಬೈಕ್ ಸವಾರರಿಬ್ಬರು, ಸ್ಕೂಟರ್ ಸವಾರರಿಬ್ಬರು, ಕಾರು ಚಾಲಕ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ನಿಂದನೆ ಮಾಡಿದವರ ಕೈಯಲ್ಲಿ ಎಸ್ ಡಿಪಿಐ ಪಕ್ಷದ ಧ್ವಜವಿತ್ತು. ಈ ಕೃತ್ಯದ ವಿಡಿಯೊ ವೈರಲ್ ಆಗಿದೆ.

ಕಣ್ಣೂರು ಗ್ರಾಮದ ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ ಮೈದಾನದಲ್ಲಿ ಎಸ್ ಡಿಪಿಐ ಪಕ್ಷ ಆಯೋಜಿಸಿದ್ದ ಜನಾಧಿಕಾರ ಕಾರ್ಯಕ್ರಮದ ವೇಳೆ ಬಂದೋಬಸ್ತ್ ನಲ್ಲಿದ್ದ ಸಿಬ್ಬಂದಿಗೆ ಪಡೀಲ್ ಕಡೆಯಿಂದ ಬಂದ ವಾಹನ ಸವಾರರು ಬ್ಯಾರಿ ಭಾಷೆಯಲ್ಲಿ ವಾಚ್ಯವಾಗಿ ನಿಂದಿಸುತ್ತಾ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸಿದ್ದರು. ಕರ್ತವ್ಯದಲ್ಲಿದ್ದ ಕಾನ್ ಸ್ಟೆಬಲ್ ಸಂಗನ ಗೌಡ ರವರ ಮೈಮೇಲೆ ಹಾಯಿಸಲು ಮುಂದಾಗಿದ್ದಾರೆ. ಆ ವೇಳೆ ಅವರು ಪಕ್ಕಕ್ಕೆ ಹಾರಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ.

ಪೊಲೀಸ್ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿ ಮಾಡಿ, ನಿಂದಿಸಿ, ಕರ್ತವ್ಯದಲ್ಲಿರುವ ಪೊಲೀಸರ ಮಾನಸಿಕ ಸ್ಥೈರ್ಯ ಹಾಳು ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT