ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು |ಮನೆ ನಿರ್ಮಾಣ; ಪರಿಶಿಷ್ಟ ಮಹಿಳೆಗೆ ಹಣ ಪಾವತಿ ವಿಳಂಬ ಆರೋಪ

Published 20 ಜುಲೈ 2023, 5:57 IST
Last Updated 20 ಜುಲೈ 2023, 5:57 IST
ಅಕ್ಷರ ಗಾತ್ರ

ಮಂಗಳೂರು: ‌ದೇರೆಬೈಲ್ ಪಶ್ಚಿಮ ವಾರ್ಡಿನ ಉರ್ವಸ್ಟೋರ್ ಸುಂಕದಕಟ್ಟೆಯಲ್ಲಿ ಮನೆಗೆ ಕುಸಿದುಬಿದ್ದ ಮನೆ ನಿರ್ಮಾಣಕ್ಕೆ ಸಂಬಂಧಿಸಿ ಪರಿಶಿಷ್ಟ ಜಾತಿಯ ಮಹಿಳೆಗೆ ಸಹಾಯಧನ ಪಾವತಿಸಲು ಪಾಲಿಕೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ದಲಿತ ಹಕ್ಕುಗಳ ಸಮಿತಿಯ (ಡಿಎಚ್‌ಎಸ್‌) ನಗರ ಘಟಕ ಆರೋಪಿಸಿದೆ. 

ಮೇಯರ್‌ ಜಯಾನಂದ ಅಂಚನ್‌ ಹಾಗೂ ಪಾಲಿಕೆ ಆಯುಕ್ತ ಆನಂದ್‌ ಅವರನ್ನು ಭೇಟಿಯಾದ ಸಮಿತಿಯ ಪ್ರಮುಖರು ಸಹಾಯಧನ ಬಿಡುಗಡೆಗೆ ಒತ್ತಾಯಿಸಿ ಬುಧವಾರ ಮನವಿ ಸಲ್ಲಿಸಿದರು.

ಸಮಿತಿಯ ನಿಯೋಗದಲ್ಲಿ ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಪಿಎಂನ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್,  ಡಿಎಚ್‌ಎಸ್‌ ಪ್ರಮುಖರಾದ ಪ್ರಶಾಂತ್ ಎಂ.ಬಿ, ರಘುವೀರ್, ನಾಗೇಂದ್ರ, ಡಿವೈಎಫ್‌ಐನ ಮನೋಜ್ ಕುಲಾಲ್, ಸುಕೇಶ್, ಪ್ರಶಾಂತ್ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT