ಬೆಂಗಳೂರು: ಶಾಲಾ, ಕಾಲೇಜುಗಳಲ್ಲಿ ಸುಸ್ಥಿರ ಶಿಕ್ಷಣ ಗುರುತಿಸಿ ಪ್ರೋತ್ಸಾಹಿಸಲು ವಿಪ್ರೊ ನೀಡುವ 2017ನೇ ಸಾಲಿನ ‘ಆರ್ಥಿಯನ್’ ಪ್ರಶಸ್ತಿ ದೇಶದ 11 ಶಾಲೆಗಳು ಮತ್ತು 8 ಕಾಲೇಜುಗಳಿಗೆ ಲಭಿಸಿದೆ.

ನಗರದ ಸರ್ಜಾಪುರದಲ್ಲಿರುವ ವಿಪ್ರೊ ಕ್ಯಾಂಪಸ್‌ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು ವಿಜೇತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಒಳಗೊಂಡ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಸಂಸ್ಥೆಯ 7ನೇ ವರ್ಷದ ಆರ್ಥಿಯನ್ ಪ್ರಶಸ್ತಿಗೆ ದೇಶದ ನಾನಾ ಶಾಲಾ-ಕಾಲೇಜುಗಳಿಂದ 1,200 ಪ್ರವೇಶಗಳು ಬಂದಿದ್ದವು. ಅದರಲ್ಲಿ ತೀರ್ಪುಗಾರರು 11 ಶಾಲೆಗಳು ಮತ್ತು 8 ಕಾಲೇಜು ತಂಡಗಳನ್ನು ಆಯ್ಕೆ ಮಾಡಿದ್ದಾರೆ.

‘ಶಾಲಾ ವಿಭಾಗದ ಪ್ರಶಸ್ತಿಗೆ ಈ ಬಾರಿ ನೀರು ಮತ್ತು ಜೀವವೈವಿಧ್ಯ ಅರ್ಥ ಮಾಡಿಕೊಳ್ಳುವ ವಿಷಯ ಕುರಿತ ಪ್ರಬಂಧಗಳನ್ನು ಆಹ್ವಾನಿಸಲಾಗಿತ್ತು. ಕಾಲೇಜು ವಿಭಾಗದ ಪ್ರಶಸ್ತಿಗೆ ಸುಸ್ಥಿರ ನಗರ ಅಭಿವೃದ್ಧಿಯಲ್ಲಿ ನೀರು, ತ್ಯಾಜ್ಯ ನಿರ್ವಹಣೆ ಕುರಿತ ವಿಷಯ ನೀಡಲಾಗಿತ್ತು’ ಎಂದು ವಿಪ್ರೊ ಸುಸ್ಥಿರ ವಿಭಾಗದ ಮುಖ್ಯಸ್ಥ ಅನುರಾಗ್ ಬೇಹರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.