ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಉಗ್ರ ಸಂಘಟನೆ ಲಷ್ಕರ್ ಪರ ಗೋಡೆ ಬರಹ

Last Updated 27 ನವೆಂಬರ್ 2020, 7:35 IST
ಅಕ್ಷರ ಗಾತ್ರ
ADVERTISEMENT
""

ಮಂಗಳೂರು: ನಗರದ ಅಪಾರ್ಟ್‌ಮೆಂಟ್‌‌‌ ಒಂದರ ಕೌಂಪೌಂಡ್‌‌‌ ಮೇಲೆ ಕಿಡಿಗೇಡಿಗಳು ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಮಂಗಳೂರಿನ ಸರ್ಕ್ಯೂಟ್‌‌ ಹೌಸ್‌‌ನ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌‌ ಒಂದರ ಕೌಂಪೌಂಡ್‌ನ ಮೇಲೆ ಹ್ಯಾಷ್ ಟ್ಯಾಗ್ ಹಾಕಿ, 'ಲಷ್ಕರ್‌‌ ಜಿಂದಾಬಾದ್'‌‌‌‌‌ ಎಂದು ಬರೆದಿದ್ದು, 'Do not force us to invite Lashkar-e-Toiba and Taliban to Deal with Sanghis and Manvedis' ಎಂದು ಬರೆಯಲಾಗಿದೆ.

ಉಗ್ರ ಸಂಘಟನೆಗಳ ಪರ ವಿವಾದಾತ್ಮಕವಾದ ಗೋಡೆ ಬರಹ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಕದ್ರಿ ಪೊಲೀಸರು ಬರಹದ ಮೇಲೆ ಬಣ್ಣ ಬಳಿದಿದ್ದಾರೆ.

ಈ ಕುರಿತು ಗಂಭೀರವಾದ ತನಿಖೆ ನಡೆಸಲಾಗುವುದು ಎಂದೂ ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರದ ಅಪಾರ್ಟ್‌ಮೆಂಟ್‌‌‌ ಒಂದರ ಕೌಂಪೌಂಡ್‌‌‌ ಮೇಲೆ 'ಲಷ್ಕರ್‌‌ ಜಿಂದಾಬಾದ್' ಎಂದು ಬರೆದಿರುವುದನ್ನು ಖಂಡಿಸಿ ಶುಕ್ರವಾರ ನಗರದಲ್ಲಿ ಬಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT