ಗುರುವಾರ , ಜನವರಿ 21, 2021
29 °C

ಲಷ್ಕರ್ ಪರ ಗೋಡೆಬರಹ: ಮೂವರ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಅಪಾರ್ಟ್‌ ಮೆಂಟ್‌ವೊಂದರ ಕಾಂಪೌಂಡ್‌ ಗೋಡೆ ಮೇಲೆ ‘ಲಷ್ಕರ್’ ಪರ ಸಂದೇಶ ಬರೆದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಶಂಕಿತ ಮೂವರ ವಿಚಾರಣೆ ನಡೆಸಿದ್ದಾರೆ.

ಈ ಗೋಡೆ ಬರಹವನ್ನು ಸ್ಪ್ರೇ ಪೇಯಿಂಟ್‌ ಮೂಲಕ ಬರೆದು, ತಕ್ಷಣವೇ ಪರಾರಿಯಾಗಿರುವ ಸಾಧ್ಯತೆ ಇದೆ. ಈ ಸಂಬಂಧ ಮೂವರ ವಿಚಾರಣೆ ನಡೆಸಿದ್ದು, ಕೃತ್ಯದ ಹಿಂದಿನ ಸಂಘಟನೆ ಹಾಗೂ ಕುಮ್ಮಕ್ಕು ನೀಡಿದವರ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕದ್ರಿ, ಕೆಪಿಟಿ, ಕದ್ರಿ ಕಂಬಳ, ಕುಂಟಿಕಾನ, ಬಿಜೈ ಸುತ್ತಲ ಪ್ರದೇಶದ ಸಿಸಿಟಿವಿ ಕ್ಯಾಮೆರಾ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ನಾನಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಂಗಳೂರು ನಗರ ಕೇಂದ್ರ ಉಪವಿಭಾಗ ಎಸಿಪಿ ಎಂ.ಜಗದೀಶ್, ಕದ್ರಿ ಪೊಲೀಸ್ ಇನ್‌ಸ್ಪೆಕ್ಟರ್ ಪವಿತ್ರ ತೇಜ, ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.

ಇದನ್ನೂ ಓದಿ | ಮಂಗಳೂರು: ಉಗ್ರ ಸಂಘಟನೆ ಲಷ್ಕರ್ ಪರ ಗೋಡೆ ಬರಹ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು