ಡಿಸಿಆರ್‌ಇ ಠಾಣೆ–ಸಿಬ್ಬಂದಿ ಕೊರತೆ
‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಠಾಣೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಡಿಸಿಆರ್‌ಇ ಠಾಣೆಯ ಎಸ್.ಪಿ
ಯಾಗಿರುವ ಸಿ.ಎ.ಸೈಮನ್ ಅವರಿಗೆ ಧರ್ಮಸ್ಥಳ ಪ್ರಕರಣದ ಸಲುವಾಗಿ ರಚಿಸಿರುವ ಎಸ್ಐಟಿ ಹೆಚ್ಚುವರಿ ಹೊಣೆಯೂ ಇದೆ. ದೂರುದಾರರು ಅವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ’ ಎಂದು ಕೆಲವರು ದೂರಿದರು.
‘ಕಾರ್ಕಳದ ಅಭಿಷೇಕ್ ಆಚಾರ್ಯ ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗಿದೆ. ಅದು ಹನಿಟ್ರ್ಯಾಪ್ ಅಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಆದರೂ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಯುವತಿ ವಿರುದ್ಧ ಅಪಪ್ರಚಾರ ಮುಂದುವರಿದಿದೆ. ಈ ಬಗ್ಗೆ ನ್ಯಾಯಕೋರಿ ಡಿಸಿಆರ್‌ಇ ಮೊರೆ ಹೋದರೂ ಸ್ಪಂದನೆ ಸಿಕ್ಕಿಲ್ಲ’ ಎಂದು ಆನಂದ ಅಸಮಾಧಾನ ವ್ಯಕ್ತಪಡಿಸಿದರು. ಡಿಸಿಆರ್‌ಇ ಠಾಣೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮವಹಿಸುವಂತೆ ಕೋರಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಡಿಸಿಪಿ ಭರವಸೆ ನೀಡಿದರು.