ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಇಬ್ಬರು ಬಾಲಕಿಯರು ಸೇರಿ ಮೂವರಿಗೆ ಕೋವಿಡ್-19

Last Updated 6 ಮೇ 2020, 8:16 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಬುಧವಾರ ಮತ್ತೆ ಮೂರು ಕೋವಿಡ್-19 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 28 ಪ್ರಕರಣ ಪತ್ತೆಯಾದಂತಾಗಿದೆ.

ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಹೊಂದಿದ್ದ 58 ವರ್ಷದ (ರೋಗಿ ಸಂಖ್ಯೆ 536) ಮಹಿಳೆಯಿಂದ ಇಬ್ಬರಿಗೆ ಸೋಂಕು ಹರಡಿರುವುದು ಖಚಿತವಾಗಿದೆ.ಬೋಳೂರು ನಿವಾಸಿಗಳಾದ 38 ವರ್ಷದ ಮಹಿಳೆ ಹಾಗೂ11 ವರ್ಷದ ಬಾಲಕಿಗೆ ಸೋಂಕು ಇರುವುದು ದೃಢಪಟ್ಟಿದೆ.

ಕೋವಿಡ್-19 ನಿಂದ ಮೃತಪಟ್ಟ ಬಂಟ್ವಾಳದ 50 ವರ್ಷದ ಮಹಿಳೆ(ಪಿ -360)ಯ16 ವರ್ಷದ ಮಗಳಿಗೂ ಸೋಂಕು ಇರುವುದು ದೃಢಪಟ್ಟಿದೆ. ಬಾಲಕಿಯನ್ನು ಎನ್ಐಟಿಕೆಯಲ್ಲಿವೈದ್ಯಕೀಯ ನಿಗಾದಲ್ಲಿ ಇರಿಸಲಾಗಿತ್ತು

12ನೇ ದಿನದ ಗಂಟಲು ದ್ರವದ ವರದಿ ಬಂದಿದ್ದು, ಅದರಲ್ಲಿ ಸೊಂಕು ಇರುವುದು ಖಚಿತವಾಗಿದೆ.ಜಿಲ್ಲೆಯಲ್ಲಿ ಸದ್ಯ13 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT