ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿವಿ: ಉಳ್ಳಾಲದ ಮೆರೀಡಿಯನ್ ಚಾಂಪಿಯನ್

ವಲಯ ಫುಟ್ಬಾಲ್ ಪಂದ್ಯಾಟ
Last Updated 25 ಸೆಪ್ಟೆಂಬರ್ 2019, 13:28 IST
ಅಕ್ಷರ ಗಾತ್ರ

ಪುತ್ತೂರು: ಇಲ್ಲಿಯ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರಕಾಲೇಜು ಮಂಗಳೂರು ವಲಯದ ಪುರುಷರ ಫುಟ್ಬಾಲ್ ಪಂದ್ಯಾಟದಲ್ಲಿ ಉಳ್ಳಾಲದ ಮೆರೀಡಿಯನ್ ಕಾಲೇಜು ಚಾಂಪಿಯನ್‌ಷಿಪ್ ಪಡೆದುಕೊಂಡಿದೆ.

ಮಂಗಳೂರು ವಲಯ ಮಟ್ಟದ ಫೈನಲ್ ಪಂದ್ಯಾಟದಲ್ಲಿ ಕಳೆದ ಬಾರಿಯ ಪ್ರಶಸ್ತಿ ವಿಜೇತ ತಂಡವಾದ ಮೆರೀಡಿಯನ್ ಕಾಲೇಜು ತಂಡವು ಸಂತ ಅಲೋಶಿಯಸ್ ಕಾಲೇಜು ತಂಡವನ್ನು 4-0 ಗೋಲುಗಳಿಂದ ಸೋಲಿಸಿ ಮಂಗಳೂರು ವಲಯ ಮಟ್ಟದ ಪ್ರಶಸ್ತಿಯನ್ನು ಮತ್ತೆ ತನ್ನದಾಗಿಸಿಕೊಂಡಿತು.

ಬುಧವಾರ ಬೆಳಿಗ್ಗೆ ಅತಿಥೇಯ ಫಿಲೋಮಿನಾ ಕಾಲೇಜು ಮತ್ತು ಮಂಗಳೂರಿನ ಅಲೋಶಿಯಸ್ ಕಾಲೇಜು ತಂಡಗಳ ನಡುವೆ ನಡೆದ ಮೊದಲ ಸೆಮಿಫೈನಲ್ ಪಂದ್ಯಾಟದಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 2-2 ಗೋಲುಗಳೊಂದಿಗೆ ಸಮಬಲ ಸಾಧಿಸಿದ್ದವು.

ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಅಲೋಶಿಯಸ್ ಕಾಲೇಜು ತಂಡವು 3-1 ಗೋಲುಗಳಿಂದ ಜಯ ಗಳಿಸಿ ಫೈನಲ್ ಪ್ರವೇಶಿಸಿತು. ಎರಡನೆಯ ಸೆಮಿಫೈನಲ್ ಪಂದ್ಯಾಟದಲ್ಲಿ ಉಳ್ಳಾಲದ ಮೆರೀಡಿಯನ್ ಕಾಲೇಜು ತಂಡವು ನಡುಪದವಿನ ಪಿಎ ಪ್ರಥಮ ದರ್ಜೆ ಕಾಲೇಜು ತಂಡವನ್ನು 3-0 ನೇರ ಗೋಲುಗಳಿಂದ ಸೋಲಿಸಿ ಫೈನಲ್‌ಗೆಗೆ ಪ್ರವೇಶ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT