ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆ

Published : 28 ಫೆಬ್ರುವರಿ 2024, 4:30 IST
Last Updated : 28 ಫೆಬ್ರುವರಿ 2024, 4:30 IST
ಫಾಲೋ ಮಾಡಿ
Comments

ಮೂಲ್ಕಿ (ದಕ್ಷಿಣ ಕನ್ನಡ): ಪರೀಕ್ಷೆ ಮುಗಿಸಿ ’ನಾಪತ್ತೆ‘ಯಾಗಿದ್ದ ಸುರತ್ಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯ ವಿದ್ಯಾದಾಯಿನಿ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಶವ ಹಳೆಯಂಗಡಿ ಬಳಿಯ ನಂದಿನಿ ನದಿಯಲ್ಲಿ ಕರಿತೊಟದ ರೈಲ್ವೆ ಸೇತುವೆ ಕೆಳಗೆ ಪತ್ತೆಯಾಗಿವೆ.

ಅಗರಮೇಲು ಗ್ರಾಮದ ಚಂದ್ರಕಾಂತ್ ಅವರ ಮಗ ಯಶ್ವಿತ್ (15), ಹಳೆಯಂಗಡಿ ತೋಕೂರು ನಿವಾಸಿ ವಸಂತ್ ಅವರ ಮಗ ರಾಘವೇಂದ್ರ(15), ಸುರತ್ಕಲ್ ಗುಡ್ಡ್ಡಕೊಪ್ಪಳ ನಿವಾಸಿ ವಿಶ್ವನಾಥ್ ಅವರ ಮಗ ನಿರೂಪ(15), ಚಿತ್ರಾಪುರ ನಿವಾಸಿ ದೇವದಾಸ್ ಅವರ ಮಗ ಅನ್ವಿತ್ (15) ಮೃತ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ಇಂಗ್ಲಿಷ್‌ ಪೂರ್ವಸಿದ್ಧತಾ ಪರೀಕ್ಷೆಗೆ ಮಂಗಳವಾರ ಹಾಜರಾಗಿದ್ದರು. ಆ ಬಳಿಕ ಮನೆಗೆ ಮರಳದೇ ನಾಪತ್ತೆಯಾಗಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.

ಸ್ನಾನಕ್ಕೆ ನದಿಗೆ ಇಳಿದಾಗ ಈ ಬಾಲಕರು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT