ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಿಂದ ಮಂಗಳೂರು–ಮುಂಬೈ ನಿತ್ಯ ರೈಲು

Last Updated 10 ಜೂನ್ 2021, 6:23 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ ಮುಂಬೈ- ಮಂಗಳೂರು ಸೆಂಟ್ರಲ್ (ರೈಲು ನಂ.02620/02619) ದೈನಂದಿನ ಹಬ್ಬದ ವಿಶೇಷ ರೈಲು ಸಂಚಾರವನ್ನು ದಕ್ಷಿಣ ರೈಲ್ವೆಯ ಸಹಯೋಗದೊಂದಿಗೆ ಜೂ.15ರಿಂದ ಪುನರಾರಂಭಿಸುವುದಾಗಿ ಕೊಂಕಣ ರೈಲ್ವೆ ತಿಳಿಸಿದೆ.

ಮಂಗಳೂರು ಸೆಂಟ್ರಲ್-ಮುಂಬೈ ದೈನಂದಿನ ಸೂಪರ್‌ಫಾಸ್ಟ್ ರೈಲು ಜೂ.15ರಿಂದ 30ರವರೆಗೆ ನಿತ್ಯ ಮಧ್ಯಾಹ್ನ 12.40ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 6.35ಕ್ಕೆ ಮುಂಬೈ ತಲುಪಲಿದೆ. ಜೂ.16ರಿಂದ ಜುಲೈ1ರವರೆಗೆ ನಿತ್ಯ ಮಧ್ಯಾಹ್ನ 3.20ಕ್ಕೆ ಮುಂಬೈಯಿಂದ ಹೊರಡುವ ಈ ರೈಲು, ಮರುದಿನ ಬೆಳಿಗ್ಗೆ 10.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ, ಮಡಗಾಂ ಜಂಕ್ಷನ್, ಕುಡಾಲ್, ರತ್ನಗಿರಿ, ಚಿಪ್ಳೂಣ್, ಪನ್ವೇಲ್ ಹಾಗೂ ಠಾಣೆ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಮುಂಬೈನಿಂದ ಬರುವಾಗ ಮಂಗೋನ್ ಹಾಗೂ ಖೇಡ್ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆ ಇರುತ್ತದೆ.

ಮುಂಗಡ ಸೀಟು ಕಾದಿರಿಸಿ ಈ ರೈಲಿನಲ್ಲಿ ಪ್ರಯಾಣಿಸಬೇಕು. ಮಾಸ್ಕ್ ಧರಿಸಿ, ಅಂತರ ಕಾಪಾಡುವುದು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಕೊಂಕಣ ರೈಲ್ವೆಯ ಉಪ ಮಹಾಪ್ರಬಂಧಕ ಗಿರೀಶ್ ಕರಂಡೀಕರಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT