ಮಂಗಳೂರು: ನಗರದ ಮಹಾವೀರ ವೃತ್ತದಿಂದ (ಪಂಪ್ವೆಲ್) ಕರಾವಳಿ ವೃತ್ತದವರೆಗೆ ಚತುಷ್ಪಥ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಫೆ.15ರಿಂದ ಜೂನ್ 15ರವರೆಗೆ ನಿರ್ವಹಿಸಲಿದೆ. ಈ ಅವಧಿಯಲ್ಲಿ ಪಂಪುವೆಲ್ ವೃತ್ತದಿಂದ ಕಂಕನಾಡಿ ಹಳೆ ರಸ್ತೆ - ಕಂಕನಾಡಿ ವೃತ್ತದ ರಸ್ತೆ ಮತ್ತು ಕರಾವಳಿ ವೃತ್ತದಿಂದ ಪಂಪುವೆಲ್ ವೃತ್ತದವರೆಗಿನ ಬೈಪಾಸ್ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ವಾಹನಗಳ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಪಂಪ್ವೆಲ್ ವೃತ್ತದಿಂದ ಕರಾವಳಿ ವೃತ್ತಕ್ಕೆ ವಾಹನ ಸಂಚಾರ ನಿರ್ಬಂಧಿಸಿ, ಕಂಕನಾಡಿ ಹಳೇ ರಸ್ತೆ ಮೂಲಕ ಸಂಚರಿಸಬಹುದು. ತಲಪಾಡಿ, ತೊಕ್ಕೊಟ್ಟು ಕಡೆಯಿಂದ ನಗರಕ್ಕೆ ಬರುವ ವಾಹನಗಳು ಮಹಾಕಾಳಿಪಡ್ಪು, ಮೋರ್ಗನ್ಸ್ ಗೇಟ್, ಕೋಟಿಚನ್ನಯ ವೃತ್ತ ಅಥವಾ ಮಂಗಳಾದೇವಿ ಮೂಲಕ ಸಂಚರಿಸಬಹುದು.

ಬಿ.ಸಿ ರೋಡ್ ಕಡೆಯಿಂದ ನಗರಕ್ಕೆ ಬರುವಂತಹ ಭಾರಿ ವಾಹನ ಮತ್ತು ಇತರೆ ವಾಹನಗಳು ಮತ್ತು ಲಾಲ್ಭಾಗ್ ಬಸ್ ನಿಲ್ದಾಣಕ್ಕೆ ತೆರಳುವ ಕೆಎಸ್ಆರ್ಟಿಸಿ ಬಸ್ಗಳು ಪಡೀಲ್ ಜಂಕ್ಷನ್ನಿಂದ ನಂತೂರು ಕಡೆಗೆ ಹಾಗೂ ಕೇರಳ-ಕಾಸರಗೋಡು ಕಡೆಯಿಂದ ಕರಾವಳಿ ವೃತ್ತದ ಕಡೆಗೆ ಬರುವ ಭಾರಿ ವಾಹನಗಳು ಮತ್ತು ಕೆಎಸ್ಆರ್ಟಿಸಿ ಬಸ್ಗಳು ಪಂಪ್ವೆಲ್ ವೃತ್ತದಿಂದ ನಂತೂರು ಮಾರ್ಗವಾಗಿ ಸಂಚರಿಸಬಹುದು. ನಗರದ ಒಳಭಾಗದಿಂದ ಕರಾವಳಿ ವೃತ್ತದ ಕಡೆಯಿಂದ ಪಂಪ್ವೆಲ್ ಕಡೆಗೆ ಸಂಚರಿಸುವ ವಾಹನಗಳು ಯಥವಾತ್ತಾಗಿ ಸಂಚರಿಸಬಹುದು ಎಂದು ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.