ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರೈಕೆ ಕಡಿಮೆ: ಹಸಿಮೀನು ದರ ಹೆಚ್ಚಳ ಸಂಭವ

ಆಳಸಮುದ್ರ ಮೀನುಗಾರಿಕೆ ನಿಷೇಧ ಹಿನ್ನೆಲೆ
Published 1 ಜೂನ್ 2023, 23:30 IST
Last Updated 1 ಜೂನ್ 2023, 23:30 IST
ಅಕ್ಷರ ಗಾತ್ರ

ರಂಜಿತ್‌ ಪುಣ್ಚಪ್ಪಾಡಿ

ಮಂಗಳೂರು: ಆಳ ಸಮುದ್ರದ ಮೀನುಗಾರಿಕೆ ನಿಷೇಧವಾಗಿರುವುದರಿಂದ ಮೀನಿನ ಪೂರೈಕೆ ಕಡಿಮೆಯಾಗಿದೆ.

ಧಾರಣೆ ಸದ್ಯ ಸಣ್ಣ ಗಾತ್ರದ ಬಂಗುಡೆ ಕೆ.ಜಿಗೆ ₹150, ದೊಡ್ಡ ಗಾತ್ರದ ಬಂಗುಡೆ ಕೆ.ಜಿ.ಗೆ ₹200 ಇದೆ. ಸಣ್ಣ ಗಾತ್ರದ ಬೂತಾಯಿ(ಮತ್ತಿ) ಕೆ.ಜಿ.ಗೆ ₹100, ದೊಡ್ಡ ಗಾತ್ರದ ಬೂತಾಯಿ ಕೆ.ಜಿ.ಗೆ ₹150 ಇದೆ.

ಮಾಂಜಿ ಮೀನು ದರ ಕೆ.ಜಿಗೆ ₹1000 ಇದೆ. ಮಧ್ಯಮ ಗಾತ್ರದ ಒಂದು ಅಂಜಲ್‌ ಮೀನು ₹300ರಂತೆ ಮಾರಾಟವಾಗುತ್ತಿದೆ. ಸೊರಕೆ ಮೀನು ದರ ಪ್ರತಿ ಪೀಸ್‌ಗೆ ₹250 ಇದೆ. ಡಿಸ್ಕೊ ಮೀನು ದರ ಕೆ.ಜಿ.ಗೆ ₹200 ಇದೆ. ಮುರು ಮೀನು ದರ ಕೆ.ಜಿ.ಗೆ ₹200, ಮದಿಮಾಲ್‌ ಕೆ.ಜಿ.ಗೆ ₹200, ಕಾನೆ ಕೆ.ಜಿ.ಗೆ ₹250ರಿಂದ ₹350ರಂತೆ ಮಾರಾಟವಾಗುತ್ತಿದೆ. ತೇಡೆ ದರ ಕೆ.ಜಿ.ಗೆ ₹400 ಇದೆ.

ಬೊಲ್ಲೆಂಜೀರ್‌ ಮೀನು ಕೆ.ಜಿ.ಗೆ ₹250ರಂತೆ ಮಾರಾಟವಾಗುತ್ತಿದೆ. ಸಣ್ಣ ಗಾತ್ರದ ಮೀನಿಗೆ ಕೆ.ಜಿ.ಗೆ ₹200 ಇದೆ. ಸಣ್ಣ ಗಾತ್ರದ ಸಿಗಡಿ(ಯೆಟ್ಟಿ) ಕೆ.ಜಿ.ಗೆ ₹200ರಂತೆ ಮಾರಾಟವಾಗುತ್ತಿದ್ದು, ದೊಡ್ಡ ಗಾತ್ರದ ಎಟ್ಟಿ ಕೆ.ಜಿ.ಗೆ ₹200–₹400ರಂತೆ ಮಾರಾಟವಾಗುತ್ತಿದೆ. ಅಪರೂಪದ ಕಸೆ ಮರುವಾಯಿ ದರ ಕೆ.ಜಿ.ಗೆ ₹250, ದಡ್ಡ್‌ ಮರುವಾಯಿ ₹200, ಸಣ್ಣ ಗಾತ್ರದ ಮರುವಾಯಿಗೆ ₹100 ಇದೆ. ಬೊಂಡಾಸ್‌ ಕೆ.ಜಿ.ಗೆ ₹250 ಇದೆ.

‘ಆಳ ಸಮುದ್ರದ ಮೀನುಗಾರಿಕೆಯನ್ನು 2 ತಿಂಗಳು ನಿಷೇಧಿಸಿರುವುದರಿಂದ ಮೀನಿಗಾಗಿ ನಾಡದೋಣಿ ಮೀನುಗಾರಿಕೆಯನ್ನು ಅವಲಂಬಿಸಬೇಕು. ಮೀನಿನ ಲಭ್ಯತೆ ಕಡಿಮೆಯಾಗುವುದರಿಂದ ತಮಿಳುನಾಡಿನಿಂದ ತರಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಇನ್ನು ಮುಂದೆ ಹಸಿಮೀನಿನ ದರ ಹೆಚ್ಚಳವಾಗಲಿದೆ’ ಎನ್ನುತ್ತಾರೆ ಮೀನಿನ ವ್ಯಾಪಾರಿಗಳು.

ಒಣ ಮೀನು ತುಟ್ಟಿ: ಒಣ ಮೀನಿನ ಬೆಲೆಯಲ್ಲೂ ಏರಿಕೆಯಾಗಿದೆ. ಬಲ್ಯಾರ್‌ ಕೆ.ಜಿ.ಗೆ ₹600, ಬೂತಾಯಿ ಕೆ.ಜಿ.ಗೆ ₹240, ನಂಗ್‌ ಮೀನು ಕೆ.ಜಿಗೆ ₹250 ದರ ಇದೆ. ಕೊಲ್ಲತರು ಸಣ್ಣದು ₹280, ದೊಡ್ಡದು ಕೆ.ಜಿಗೆ ₹400 ಇದೆ. ಬಂಗುಡೆ ಕೆ.ಜಿ.ಗೆ ₹320, ಕಲ್ಲೂರು ಕೆ.ಜಿಗೆ ₹320, ಸೊರಕೆ ಕೆ.ಜಿ.ಗೆ ₹400, ಮಾಂಜಿ ಕೆ.ಜಿ.ಗೆ ₹400, ಕುರ್ಚಿ ಕೆ.ಜಿ.ಗೆ ₹200, ಅಡೆಮೀನು ಕೆ.ಜಿ.ಗೆ ₹320 ದರ ಇದೆ. ಯೆಟ್ಟಿ(ಒಣ ಸಿಗಡಿ) ಕೆ.ಜಿಗೆ ₹400ರಿಂದ ₹450 ದರ ಇದೆ. ಕಟ್‌ಪೀಸ್‌ ಕೆ.ಜಿ.ಗೆ ₹400 ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT