–ರಂಜಿತ್ ಪುಣ್ಚಪ್ಪಾಡಿ

ಮಂಗಳೂರು: ನಗರದಲ್ಲಿ ದಸರಾ ಹಬ್ಬ ಸಂಭ್ರಮ ಕಳೆಗಟ್ಟಿದ್ದು, ಹೂ, ಹಣ್ಣು ದರಗಳಲ್ಲಿ ಕೊಂಚ ಏರಿಕೆಯಾಗಿದೆ.

ನವರಾತ್ರಿ ಪ್ರಯುಕ್ತ ಪೂಜೆ, ಅಲಂಕಾರ ಉದ್ದೇಶಗಳಿಗಾಗಿ ಹೂವಿಗೆ ಬೇಡಿಕೆ ಇದ್ದು, ದರದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಾ ಸಾಗುತ್ತಿದೆ. ಮಂಗಳೂರು ಮಲ್ಲಿಗೆಗೆ ಒಂದು ಚೆಂಡಿಗೆ ₹400 ದರ ಇದ್ದು, ಅಟ್ಟಿಗೆ ₹1200 ಇದೆ. ಕೆಲವೇ ದಿನಗಳಲ್ಲಿ ದರ ಏರಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಹಳದಿ ಸೇವಂತಿಗೆಗೆ ಒಂದು ಮಾರುವಿಗೆ ₹100, ಒಂದು ಮೊರಂಗೆಗೆ ₹40 ದರ ಇದ್ದು, ಇತರ ಬಣ್ಣದ ಸೇವಂತಿಗೆ ದರ ಮಾರುವಿಗೆ ₹120, ಮೊರಂಗೆಗೆ ₹50 ಇದೆ. ಒಂದು ಮಾರು ಕಾಕಡ ಮಲ್ಲಿಗೆ ದರ ₹100 ಇದ್ದು, ಅರಳಿ ಹೂ ಒಂದು ಮಾರುವಿಗೆ ₹80, ಒಂದು ಮಾರು ತುಳಸಿಗೆ ₹80 ದರ ಇದೆ. ಚೆಂಡು ಹೂ, ಗುಲಾಬಿ ಮಾಲೆಗೆ ಒಂದು ಮಾರುವಿಗೆ ₹120 ದರ ಇದೆ.

ಹಣ್ಣಿನ ದರ: ಕೆಲವು ದಿನಗಳ ಹಿಂದೆ ಕೆ.ಜಿ.ಗೆ ₹120 ಇದ್ದ ಕದಳಿ ಬಾಳೆಹಣ್ಣು ದರ ₹80ಕ್ಕೆ ಇಳಿದಿದ್ದು, ₹50 ಇದ್ದ ಪಪ್ಪಾಯಿ ದರ ₹55ಕ್ಕೆ ಜಿಗಿದಿದೆ. ಸೇಬಿಗೆ ಕೆ.ಜಿ.ಗೆ ₹160ರಿಂದ ₹180, ಮೂಸಂಬಿಗೆ ₹50, ಕಿತ್ತಳೆಗೆ ₹50ರಿಂದ ₹60, ಕಪ್ಪು ದ್ರಾಕ್ಷಿ ₹60ರಿಂದ ₹70, ಕಲ್ಲಂಗಡಿಗೆ ₹22 ಇದೆ. ಊರಿನ ಪೇರಳೆಗೆ ₹55ರಿಂದ ₹60 ದರವಿದ್ದು, ಹೈಬ್ರಿಡ್ ಪೇರಳೆಗೆ ₹85ರಿಂದ ₹90 ಇದೆ.

ದಾಳಿಂಬೆಗೆ ಕೆ.ಜಿ.ಗೆ ₹100ರಿಂದ ₹170, ಡ್ರ್ಯಾಗನ್ ಫ್ರೂಟ್‌ಗೆ ₹190ರಿಂದ ₹200 (ಕೆಂಪು), ₹140ರಿಂದ ₹159 (ಬಿಳಿ) ದರ ಇದೆ. ಲಿಚಿಗೆ ₹230ರಿಂದ ₹240, ಅನಾನಸು ₹60, ಚಿಪ್ಪಡ್ ₹40, ಪಿಯರ್ಸ್ ಸಣ್ಣದು ₹140, ದೊಡ್ಡದು ₹280 ದರ ಇದೆ.

ಡೇಂಗಿ ಪ್ರಕರಣಗಳು ಪತ್ತೆಯಾಗುತ್ತಿರುವ ಕಾರಣ ಕಿವಿ ಫ್ರುಟ್ ದರವೂ ಏರಿಕೆಯಾಗಿದ್ದು, ಪ್ರಸ್ತುತ ಕೆ.ಜಿ.ಗೆ ₹140 ಇದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ಕ್ಯಾರೆಟ್ ₹60 ಕಾಯಿಮೆಣಸು ₹100 ಬೀನ್ಸ್ ₹100 ಬೆಂಡೆಕಾಯಿ ₹60 ಬದನೆ ₹60 ತೊಂಡೆಕಾಯಿ ₹60 ಸೌತೆ ₹60 ನುಗ್ಗೆ ₹70 ಹೀರೆಕಾಯಿ ₹60 ಹಾಗಲಕಾಯಿ ₹80 ಟೊಮೆಟೊ ₹20 ಸಾಂಬಾರ್ ಸೌತೆ ₹35 ಸೋರೆಕಾಯಿ ₹60 ಬೀಟ್‌ರೂಟ್ ₹50 ಕ್ಯಾಬೇಜ್ ₹35 ಹೂಕೋಸು ₹60 ಸಿಹಿಗೆಣಸು ₹50 ಸೊಪ್ಪು 100 ಗ್ರಾಂ ₹10 ಮೂಲಂಗಿ ₹50 ಬಟಾಟೆ ₹30 ಈರುಳ್ಳಿ ₹45 ಕುಂಬಳ ₹50 ಕ್ಯಾಪ್ಸಿಕಂ ₹100 ಸಿಹಿಕುಂಬಳ ₹50 ನಿಂಬೆ ₹20ಕ್ಕೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.