ಬುಧವಾರ, ಅಕ್ಟೋಬರ್ 16, 2019
21 °C

ಪಾಲಿಕೆಯಿಂದ ಸಂತ್ರಸ್ತರಿಗೆ ಆಹಾರ ಸಾಮಗ್ರಿ ವಿತರಣೆ

Published:
Updated:
Prajavani

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರು ಪಚ್ಚನಾಡಿ ಸಂತ್ರಸ್ತರಿಗೆ ಮಾನವೀಯ ಸ್ಪಂದನೆಯಿಂದ ಶುಕ್ರವಾರ ಆಹಾರ ಸಾಮಗ್ರಿಗಳ ಕಿಟ್‌ ವಿತರಿಸಿದರು.

  ಮಂಗಳೂರು ಪೂರ್ವ ವಲಯ ರೋಟರಿ ಕ್ಲಬ್ ಮತ್ತು ಸರ್ವ ಸದಸ್ಯರ ಸಹಕಾರದೊಂದಿಗೆ ಸಂತ್ರಸ್ತರು ನೆಲೆಸಿರುವ ಕುಲಶೇಖರದ ಕರ್ನಾಟಕ ಗೃಹಮಂಡಳಿ (ಕೆಎಚ್‌ಬಿ) ವಸತಿ ನಿಲಯಕ್ಕೆ ಭೇಟಿ ನೀಡಿದ ಆಯುಕ್ತರು, ಪಾಲಿಕೆ ಅಧಿಕಾರಿಗಳು ರೋಟರಿ ಕ್ಲಬ್‌ ಪದಾಧಿಕಾರಿಗಳನ್ನು ಒಳಗೊಂಡ ತಂಡ ಸಂತ್ರಸ್ತರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿದರು.

ಸಂತ್ರಸ್ತರಿಗೆ  ‘ನಿಮ್ಮ ಜೊತೆ ನಾವಿದ್ದೇವೆ, ಸಮಸ್ಯೆಯನ್ನು ಶೀಘ್ರ ಬಗೆಹರಿಸುತ್ತೇವೆ’ ಮಾನಸಿಕ ಧೈರ್ಯ ತುಂಬಿದರು ಈ ಸಂದರ್ಭದಲ್ಲಿ ಪರಿಸರ ಎಂಜಿನಿಯರ್‌ ಮಧು ಉಪಸ್ಥಿತರಿದ್ದರು.

Post Comments (+)