ಗುರುವಾರ , ಜೂಲೈ 9, 2020
23 °C
ಕಾರ್ಮಿಕರ ದಿನಾಚರಣೆಯಲ್ಲಿ ಐವನ್ ಡಿಸೋಜ ಆಗ್ರಹ

ಅಸಂಘಟಿತ ಕಾರ್ಮಿಕರಿಗೆ ಪ್ಯಾಕೇಜ್‌ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದೇಶದಲ್ಲಿ ಅಸಂಘಟಿತ ಕಾರ್ಮಿಕರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದರು.

ಕೊಟ್ಟಾಗ ಚೌಕಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಚಾಲಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಶೇ.80ರಷ್ಟು ಅಸಂಘಟಿತ ಕಾರ್ಮಿಕರಿಗೆ ರಕ್ಷಣೆ ಇಲ್ಲದೇ, ಬೀದಿಗೆ ಬರುವಂತಾಗಿದೆ. ದೇಶದ ಎಲ್ಲ ಕಾನೂನುಗಳು 40 ವಯಸ್ಸಿನವರಿಗೆ ಮಾತ್ರ ಅನುಕೂಲವಾಗಿರುವುದು 40 ವರ್ಷದ ಮೇಲಿನ ಕಾರ್ಮಿಕರಿಗೆ ರಕ್ಷಣೆ ನೀಡುವಂಥ ಕಾನೂನುಗಳನ್ನು ತರುವ ಅವಶ್ಯಕತೆಗಳಿವೆ ಎಂದು ಹೇಳಿದರು.

ಅಸಂಘಟಿತ ಕಾರ್ಮಿಕರು ತ್ಯಾಗ ಮಾಡಿದ್ದಾರೆ. ಈ ಸಮಸ್ಯೆಗೆ ಶೇ 80ರಷ್ಟು ಕಾರ್ಮಿಕರು ಸಾಥ್ ನೀಡಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ಒಂದು ಪ್ಯಾಕೇಜ್‌ ಅನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಬೇರೆ ರಾಜ್ಯಗಳಲ್ಲಿರುವ ಕಾರ್ಮಿಕರಿಗೆ ವಿವಿಧ ರೀತಿಯಲ್ಲಿ ರಕ್ಷಣೆ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ರಿಕ್ಷಾ ಚಾಲಕರು, ಹೋಟೆಲ್‌ನಲ್ಲಿ ಕೆಲಸ ಮಾಡುವವರು, ಟೆಂಪೋ ಚಾಲಕರು, ಲಾರಿ ಕಾರ್ಮಿಕರು ಸೇರಿದಂತೆ ಯಾವುದೇ ಕಾರ್ಮಿಕರಿಗೆ ಈ ರೀತಿಯ ವಿಶೇಷ ಪ್ಯಾಕೇಜ್‌ ನೀಡಿಲ್ಲ ಎಂದು ಹೇಳಿದರು.

ಕಾರ್ಮಿಕರ ಶಕ್ತಿಯನ್ನು ಸದುಪಯೋಗ ಪಡಿಸಿಕೊಳ್ಳಲು ಮಾಲೀಕರು ಮತ್ತು ಕಾರ್ಮಿಕರ ವ್ಯತ್ಯಾಸವನ್ನು ಹೋಗಲಾಡಿಸಿ, ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸಲು ಕೇಂದ್ರ ಸರ್ಕಾರದ ಕಾನೂನುಗಳು ರಚನೆ ಮಾಡಬೇಕಾದ ಅವಶ್ಯಕತೆ ಇದೆ. ಮಾಲೀಕರು ದುಡಿಸುವುದರ ಜತೆಗೆ ತಮಗೆ ಬಂದ ಪಾಲಿನಲ್ಲಿ ಕಾರ್ಮಿಕರಿಗೆ ನೀಡುವುದಕ್ಕೆ ಹಿಂಜರಿಯುವ ಪ್ರಸಂಗಗಳು ಉದ್ಭವಿಸುತ್ತಿವೆ. ಇದನ್ನು ನಿವಾರಿಸಲು ಕಾನೂನುಗಳನ್ನು ತಂದು ಮಾಲೀಕರು ಮತ್ತು ಕಾರ್ಮಿಕರ ನಡುವೆ ಇರುವ ಸಂಬಂಧವನ್ನು ವೃದ್ದಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಅನೇಕ ಸಂಘಟನೆಗಳಲ್ಲಿ ಕಾರ್ಯನಿರ್ವಹಣೆ ಮಾಡಿದ ಸುಕುಮಾರ್ ಕುಲಾಲ್, ಜನಾರ್ದನ್, ಚಂದ್ರಶೇಖರ್, ಅಡಪ್ಪ, ಕೃಷ್ಣ ಸಾಲಿಯಾನ್ ಅವರನ್ನು ಲಾಕ್‌ಡೌನ್ ನಿಯಮಾವಳಿ ಪಾಲಿಸುವ ಮೂಲಕ ಸನ್ಮಾನಿಸಲಾಯಿತು. ಸುಮಾರು 50 ಕಾರ್ಮಿಕರ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ವಿತರಣೆ ಮಾಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು