ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘16 ಕುಟುಂಬಗಳ ಸ್ಥಳಾಂತರಕ್ಕೆ ಪಾಲಿಕೆ ಸೂಚನೆ’

Published 5 ಆಗಸ್ಟ್ 2024, 16:25 IST
Last Updated 5 ಆಗಸ್ಟ್ 2024, 16:25 IST
ಅಕ್ಷರ ಗಾತ್ರ

ಮಂಗಳೂರು: ‍ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ 16 ಮನೆಗಳು ಅಪಾಯಕ್ಕೆ ಸಿಲುಕಿವೆ. ಬೇರೆ ಕಡೆಗೆ ಸ್ಥಳಾಂತರಗೊಳ್ಳುವಂತೆ ಸಂತ್ರಸ್ತ ಕುಟುಂಬಗಳಿಗೆ ಪಾಲಿಕೆ ಸೂಚನೆ ನೀಡಿದೆ.

‘ಕೆತ್ತಿಕಲ್‌ನಲ್ಲಿ 12 ಮನೆಗಳು ಹಾಗೂ ಕಣ್ಣೂರಿನ ಬಳ್ಳೂರುಗುಡ್ಡೆಯಲ್ಲಿ 4  ಮನೆಗಳು ಮಳೆಯಿಂದಾಗಿ ಅಪಾಯಕ್ಕೆ ಸಿಲುಕಿವೆ. ಬೇರೆಡೆ ಸ್ಥಳಾಂತರಗೊಳ್ಳುವಂತೆ ಈ ಕುಟುಂಬಗಳಿಗೆ ಸೂಚಿಸಿದ್ದೇವೆ’ ಎಂದು ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. 

ಅವರಿಗೆ ಬಾಡಿಗೆ ಮೊತ್ತ ಮರುಪಾವತಿಗೆ ಮಾಡುವಿರಾ ಎಂಬ ಪ್ರಶ್ನೆಗೆ ’ರಾಜ್ಯ ಸರ್ಕಾರ ಅನುದಾನ ಮಂಜೂರು ಮಾಡಿದರೆ ನೀಡುತ್ತೇವೆ. ಪಾಲಿಕೆ ಬಳಿ ಹಣವಿಲ್ಲ’ ಎಂದರು.

‘ಕೆತ್ತಿಕಲ್‌ನಲ್ಲಿ ಪಾಲಿಕೆ ನಿರ್ಮಿಸುತ್ತಿರುವ ವೆಟ್‌ವೆಲ್‌ ಅನ್ನು ಸುರತ್ಕಲ್‌ ಎನ್‌ಐಟಿಕೆ ತಜ್ಞರು ಪರಿಶೀಲಿಸಲಿದ್ದಾರೆ. ಅವರು ಅಧ್ಯಯನ ನಡೆಸಿ ವರದಿ ನೀಡಿದ ಬಳಿಕ ಅಲ್ಲಿ ಕಾಮಗಾರಿ ಮುಂದುವರಿಸಬೇಕೋ ಬೇಡವೋ ಎಂದು ನಿರ್ಧರಿಸುತ್ತೇವೆ’ ಎಂದು ತಿಳಿಸಿದರು.

‘ವಾರ್ಡ್ ಸಮಿತಿ ಉಪವಿಧಿಗಳ (ಬೈಲಾ) ಕರಡಿನಲ್ಲಿ ಕೆಲವೊಂದು ಲೋಪಗಳಿದ್ದವು. ಆ ಕರಡನ್ನು ಪರಿಷ್ಕರಿಸಿದ್ದು, ‌ಪಾಲಿಕೆಯ ಮುಂದಿನ ಸಭೆಯಲ್ಲಿ ಮಂಡಿಸಲಿದ್ದೇವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT