ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: 100 ಕೊಂಕಣಿ ಪುಸ್ತಕ ಮುದ್ರಣ

‘ಮೈಕಲ್ ಡಿಸೋಜ ವಿಷನ್ ಕೊಂಕಣಿ’ ಒಪ್ಪಂದಕ್ಕೆ ಸಹಿ
Last Updated 17 ಫೆಬ್ರುವರಿ 2023, 6:48 IST
ಅಕ್ಷರ ಗಾತ್ರ

ಮಂಗಳೂರು: ಗುಣಮಟ್ಟದ ಪುಸ್ತಕ ಪ್ರಕಟಣೆಯ ಮೂಲಕ ಕೊಂಕಣಿ ಸಾಹಿತ್ಯದ ಬೆಳವಣಿಗೆ ನವಚೇತನ ತುಂಬುವ ಆಶಯದೊಂದಿಗೆ ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿಸೋಜ ದುಬೈ ಅವರ ಮಹತ್ವಾಕಾಂಕ್ಷಿ ಯೋಜನೆ ‘ಮೈಕಲ್ ಡಿಸೋಜ ವಿಷನ್ ಕೊಂಕಣಿ’ ಕಾರ್ಯಕ್ರಮಕ್ಕೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ಚಾಲನೆ ನೀಡಲಾಯಿತು.

ವಿಶ್ವ ಕೊಂಕಣಿ ಕೇಂದ್ರದ ಪರವಾಗಿ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ ಮತ್ತು ವಿಷನ್ ಕೊಂಕಣಿ ಪರವಾಗಿ ಮೈಕಲ್ ಡಿಸೋಜ ಒಪ್ಪಂದಕ್ಕೆ ಸಹಿ ಮಾಡಿದರು.

ಕೊಂಕಣಿ ಸಾಹಿತ್ಯ ಅಭಿವೃದ್ಧಿ ಆಗಬೇಕಾದರೆ ಉತ್ತಮ ಗುಣಮಟ್ಟದ ಪುಸ್ತಕಗಳು ಪ್ರಕಟವಾಗಬೇಕು. ಸಾಹಿತಿ ಮತ್ತು ಪ್ರಕಾಶಕರಿಗೆ ಮುದ್ರಣ ವೆಚ್ಚ ಭರಿಸುವುದು ತೊಡಕಾಗಬಾರದು ಎಂಬ ದೃಷ್ಟಿಯಿಂದ ‘ವಿಷನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಮುಂದಿನ ಐದು ವರ್ಷಗಳಲ್ಲಿ 100 ಪುಸ್ತಕ ಮುದ್ರಿಸುವ ಗುರಿ ಇಟ್ಟುಕೊಂಡು ಅನುದಾನ ನೀಡಲಾಗುವುದು’ ಎಂದು ಮೈಕಲ್ ಡಿಸೋಜ ತಿಳಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಮಾತನಾಡಿದರು. ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜ, ಟ್ರಸ್ಟಿ ಮೆಲ್ವಿನ್ ರೊಡ್ರಿಗಸ್, ವಿಶ್ವ ಕೊಂಕಣಿ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಬಿ. ದೇವದಾಸ ಪೈ, ಡಾ. ಬಿ. ದೇವದಾಸ ಪೈ, ಸಂಯೋಜಕಿ ಸಹನಾ ಕಿಣಿ, ಕವಿ ಟೈಟಸ್ ನೊರೊನ್ಹಾ, ರಂಗಕರ್ಮಿ ಎಡ್ಡಿ ಸಿಕ್ವೇರಾ, ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆಯ ಕೋಶಾಧಿಕಾರಿ ರೋಶನ್ ಮಾಡ್ತಾ ಹಾಗೂ ನಾಸಿರ್ ಇದ್ದರು.

ಗುರುದತ್ತ ಬಂಟ್ವಾಳಕಾರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT