ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಜನೆಯಿಂದ ಮನಸ್ಸು ಶುದ್ಧ : ಪಡಂಗ

Last Updated 26 ಆಗಸ್ಟ್ 2018, 10:43 IST
ಅಕ್ಷರ ಗಾತ್ರ

ಮೂಲ್ಕಿ: ‘ಭಜನಾ ಸಂಕೀರ್ತನೆಯಿಂದ ನಮ್ಮ ಮನಸ್ಸುಶುದ್ಧಗೊಳ್ಳುತ್ತದೆ. ಮಕ್ಕಳಲ್ಲಿ ಭಜನಾ ಪಠಿಸಿದಲ್ಲಿ ಸ್ಪಷ್ಟವಾದ ಉಚ್ಛಾರಣೆಯನ್ನು ಕಾಣಲು ಸಾಧ್ಯವಿದೆ’ ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಹೇಳಿದರು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾನುವಾರ ಶ್ರೀ ನಾರಾಯಣ ಗುರು ಜನ್ಮದಿನಾಚರಣೆಯ ಪ್ರಯುಕ್ತ ನಡೆದ ಭಜನಾ ಸಂಕೀರ್ತನೆಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆಯಲಿರುವ ಭಜನಾ ಸಂಕೀರ್ಥನೆಯನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಮೋಹನ್ ಅಂಚನ್ ಉದ್ಘಾಟಿಸಿದರು.

‌ಸಂಘದ ಮಾಜಿ ಅಧ್ಯಕ್ಷರುಗಳಾದ ಎಚ್.ವಿ.ಕೋಟ್ಯಾನ್, ರಾಘು ಸುವರ್ಣ, ಯದೀಶ್ ಅಮೀನ್ ಕೊಕ್ಕರ್ಕಲ್, ಹರಿಶ್ಚಂದ್ರ ಪಿ. ಸಾಲ್ಯಾನ್, ಉಪಾಧ್ಯಕ್ಷರಾದ ಸರೋಜಿನಿ ಸುವರ್ಣ, ಗೋವಿಂದ ಕೋಟ್ಯಾನ್, ಸಹ ಕಾರ್ಯದರ್ಶಿಗಳಾದ ಪ್ರಭಾಕರ ಕವತ್ತಾರು, ಗಿರಿಧರ ಅಮೀನ್, ಕಾರ್ಯದರ್ಶಿ ನರೇಂದ್ರ, ಕೋಶಾಧಿಕಾರಿ ಪ್ರಕಾಶ್ ಸುವರ್ಣ, ವಾಮನ ಕೋಟ್ಯಾನ್, ಭಜನಾ ಪ್ರಮುಖರಾದ ರಮೇಶ್ ಅಮೀನ್, ಗಿರೀಶ್ ಕೋಟ್ಯಾನ್, ಕಿಶೋರ್ ಸಾಲ್ಯಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT