ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಯ| ಎಚ್.ಎಂ.ನಂದಕುಮಾರ್‌ಗೆ ತಪ್ಪಿದ ಕಾಂಗ್ರೆಸ್ ಟಿಕೆಟ್ : ಅಸಮಾಧಾನ

ಸುಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ನಂದಕುಮಾರ್ ಅಭಿಮಾನಿಗಳ ಸಭೆ
Last Updated 27 ಮಾರ್ಚ್ 2023, 5:45 IST
ಅಕ್ಷರ ಗಾತ್ರ

ಸುಳ್ಯ: ವಿಧಾನಸಭಾ ಚುನಾವಣೆಗೆ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ಎಂ.ನಂದಕುಮಾರ್ ಅವರಿಗೆ ಟಿಕೆಟ್ ನೀಡದೇ ಇರುವುದನ್ನು ಖಂಡಿಸಿ ಕಾರ್ಯಕರ್ತರು ಮತ್ತು ನಂದಕುಮಾರ್ ಅಭಿಮಾನಿ ಬಳಗದ ಸಭೆ ಸುಳ್ಯ ಯುವಜನ ಸಂಯುಕ್ತ ಮಂಡಳಿಯಲ್ಲಿ ಭಾನುವಾರ ನಡೆಯಿತು.

ನಂದಕುಮಾರ್ ಅವರಿಗೆ ಅವಕಾಶ ನೀಡದಿರುವುದಕ್ಕೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ‘ನಾವು ಕಾಂಗ್ರೆಸ್ಸಿಗರು, ನಮಗೆ ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂಬ ಉದ್ದೇಶ ಇದೆ. ಹಾಗಾಗಿ ಜನರೊಂದಿಗೆ ಬೆರೆಯುವ, ಕ್ಷೇತ್ರದಲ್ಲಿ ಅಪಾರ ಜನ ಬೆಂಬಲ ಹೊಂದಿರುವ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕೆನ್ನುವುದು ಆಗ್ರಹವಾಗಿತ್ತು. ಅದನ್ನು ಪರಿಗಣಿಸದೇ ಹೈಕಮಾಂಡ್ ತಪ್ಪು ನಿರ್ಧಾರ ಮಾಡಿದೆ. ನಂದಕುಮಾರ್ ಅವರಿಗೆ ಎಲ್ಲ ಜಾತಿ ಧರ್ಮದವರ ಬೆಂಬಲ ಇದೆ. ಅವರನ್ನು ಕಡೆಗಣಿಸಿರುವುದು ಕಾಂಗ್ರೆಸ್‌ಗೆ ದೊಡ್ಡ ನಷ್ಟ ಉಂಟು ಮಾಡಲಿದೆ’ ಎಂಬ ಮಾತು ಸಭೆಯಲ್ಲಿ ಕೇಳಿಬಂತು.

ಬ್ಲಾಕ್ ಸಮಿತಿಯಾಲಿ, ಜಿಲ್ಲಾ ಕಾಂಗ್ರೆಸ್ ಸಮಿತಿಯಾಗಲೀ ಕಾರ್ಯ ಕರ್ತರ ಅಭಿಪ್ರಾಯ ಕೇಳದೆ ಸುಳ್ಯದಲ್ಲಿ ಯಾರಿಗೂ ಪರಿಚಯವಿಲ್ಲದ, ಮತದಾರರಿಗೂ ಒಲವಿಲ್ಲದ ಜಿ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ನಂದಕುಮಾರ್ ಅವರಿಗೆ ನೀಡದೇ ಇದ್ದರೆ ತಟಸ್ಥರಾಗಿರುವುದಾಗಿ ಕಾರ್ಯ ಕರ್ತರು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತಿತರ ಮುಖಂಡ ರನ್ನು ಭೇಟಿ ಮಾಡಿ ಮನವಿ ನೀಡುವ ಕುರಿತು ಚರ್ಚೆ ನಡೆಯಿತು.

ಸಚಿನ್ ರಾಜ್ ಶೆಟ್ಟಿ, ಗೋಕುಲ್ ದಾಸ್, ಭವಾನಿ ಶಂಕರ್ ಕಲ್ಮಡ್ಕ, ಅನಿಲ್ ರೈ ಬೆಳ್ಳಾರೆ, ಸತ್ಯ ಕುಮಾರ್ ಅಡಿಂಜ, ಜಗನ್ನಾಥ್ ಪೂಜಾರಿ, ದೇವಿಪ್ರಸಾದ್ ಕುದ್ಪಾಜೆ, ಬಿ ಲಕ್ಷ್ಮಣ ಗೌಡ ಬೊಳ್ಳಾಜೆ, ಲೋಕೇಶ್ ಹಾಕ್ರಿಕಟ್ಟೆ, ಮುತ್ತಪ್ಪ ಪೂಜಾರಿ, ಕಮಲಾಕ್ಷ ಕೊಲ್ಲಮೊಗ್ರ, ಜಂಶೀರ್ ಶಾಲೆಕರ್, ತೇಜಕುಮಾರ್ ಬಾಳುಗೋಡು, ಅಬ್ಬಾಸ್ ಎ.ಬಿ, ಚೇತನ್ ಕಜೆಗದ್ದೆ, ಸುರೇಶ್ ಹಳೆಗೇಟು, ಬಶೀರ್ ಬೆಳ್ಳಾರೆ ಮಾತನಾಡಿದರು.

ಸಚಿನ್ ರಾಜ್ ಶೆಟ್ಟಿ ನಿರೂಪಿಸಿದರು. ಭವಾನಿ ಶಂಕರ್ ಕಲ್ಮಡ್ಕ ಸ್ವಾಗತಿಸಿ, ಗೋಕುಲ್‌ದಾಸ್ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT