ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ಧರಿಸುವುದಾದರೆ ಕೇಸರಿ ಧರಿಸುವುದರಲ್ಲಿ ತಪ್ಪಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

ವಸ್ತ್ರ ಸಂಹಿತೆಗೆ ಸರ್ಕಾರವೇ ಅಡ್ಡಿ
Published 23 ಡಿಸೆಂಬರ್ 2023, 13:21 IST
Last Updated 23 ಡಿಸೆಂಬರ್ 2023, 13:21 IST
ಅಕ್ಷರ ಗಾತ್ರ

ಸುರತ್ಕಲ್: ‘ಶಾಲೆ ಕಾಲೇಜುಗಳು ರೂಪಿಸಿಕೊಂಡಿರುವ ಶಿಸ್ತುಬದ್ಧ ವಸ್ತ್ರ ಸಂಹಿತೆಗೆ ಸರ್ಕಾರವೇ ಅಡ್ಡಗಾಲು ಹಾಕುತ್ತಿರುವುದು ವಿಷಾದನೀಯ. ಹಿಜಾಬ್ ಧರಿಸಲು ಶಾಲಾ ಕೊಠಡಿ ಒಳಗೆ ಅನುಮತಿ ನೀಡುವುದಾದರೆ ಕೇಸರಿ ಶಾಲು ಧರಿಸಿ ಹಿಂದೂ ವಿದ್ಯಾರ್ಥಿಗಳು ಹೋಗುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದರು.

ಮುಂದಿನ ದಿನಗಳಲ್ಲಿ ಶಾಲೆ, ಕಾಲೇಜು ಕ್ಯಾಂಪಸ್‌ಗಳಲ್ಲಿ ವಸ್ತ್ರ ಸಂಹಿತೆ ಕುರಿತಂತೆ ಸುಧೀರ್ಘ ಹೋರಾಟವೊಂದು ವಿವಿಧ ವಿದ್ಯಾರ್ಥಿ ಸಂಘಟನೆಗಳ ನಡುವೆ ರೂಪುಗೊಳ್ಳಬಹುದು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹಿಜಾಬ್ ಧರಿಸಲು ಕಾಲೇಜಿನ ಒಳಗೂ ಅನುಮತಿ ನೀಡುವುದಾದರೆ ಕೇಸರಿ ಶಾಲು ಧರಿಸಲು ಹಿಂದೂ ವಿದ್ಯಾರ್ಥಿಗಳಿಗೂ ಆಯ್ಕೆ ಸ್ವಾತಂತ್ರ್ಯವಿದೆ. ಜಾತಿಗೊಂದರಂತೆ ಬಟ್ಟೆ ಧರಿಸಲು ಕ್ಯಾಂಪಸ್‌ನಲ್ಲಿ ಅನುಮತಿ ನೀಡುವ ಮೂಲಕ ಸರ್ಕಾರ ಶಾಲೆ-ಕಾಲೇಜಿನ ಸಮವಸ್ತ್ರ ವ್ಯವಸ್ಥೆಗೆ ಬೆಲೆ ಇಲ್ಲದಂತೆ ಮಾಡಿದೆ. ಇದರ ವಿರುದ್ಧ ಬಿಜೆಪಿ ಹೋರಾಟದ ಹಾದಿಯನ್ನು ಮುಕ್ತವಾಗಿ ಇರಿಸಿದೆ. ಸಮಾಲೋಚನೆಯ ಬಳಿಕ ಹೋರಾಟದ ಅಭಿಯಾನ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT