ಸಿಎಂ ಕುಮಾರಸ್ವಾಮಿಗೆ ಶಾಸಕ ಸುನೀಲ ಕುಮಾರ ತಿರುಗೇಟು

ಶನಿವಾರ, ಏಪ್ರಿಲ್ 20, 2019
24 °C

ಸಿಎಂ ಕುಮಾರಸ್ವಾಮಿಗೆ ಶಾಸಕ ಸುನೀಲ ಕುಮಾರ ತಿರುಗೇಟು

Published:
Updated:

ಮಂಗಳೂರು: ಇಲ್ಲಿನ ಪೋಷಕರಿಗೆ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಕೇಳವಂತಹ ತಿಳಿವಳಿಕೆ ಇಲ್ಲ ಎಂದು ಶಾಸಕ ಸುನಿಲಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ಆಯೋಜಿಸಲಾದ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಇದನ್ನೂ ಓದಿ: ಅವರದು ವಂಶೋದಯ, ನಮ್ಮದು ಅಂತ್ಯೋದಯ’– ಮಂಗಳೂರಿನಲ್ಲಿ ಪ್ರಧಾನಿ ಮೋದಿ

ಕಾಂಗ್ರೆಸ್ ಅಭ್ಯರ್ಥಿ ಕೇಸರಿ ಶಾಲು ಹಾಕಿಕೊಳ್ಳುತ್ತಿದ್ದು, ರಾಹುಲ್ ಅವರು ಜನಿವಾರ ಹಾಕಿಕೊಂಡು ದೇವಸ್ಥಾನಗಳ ಸುತ್ತಾಟ ಮಾಡುತ್ತಿದ್ದಾರೆ. ಇದೇ ಅಚ್ಛೇದಿನ್ ಎಂದರು.

ಸಿ.ಟಿ. ರವಿ ಮಾತನಾಡಿ, ರಾಮ ಹಾಗೂ ಡಾ. ಅಂಬೇಡ್ಕರ್ ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ದಲಿತರಿಂದ ಬೇರ್ಪಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ ಇದು ಸಾಧ್ಯವಿಲ್ಲ ಕಂಬಾಳಪಲ್ಲಿಯಲ್ಲಿ ದಲಿತರ ಹತ್ಯಾಕಾಂಡ ನಡೆದಾಗ ಯಾರು ಆಡಳಿತ ನಡೆಸಿದ್ದರು ಎಂದು ಪ್ರಶ್ನಿಸಿದರು.

ಕುಟುಂಬ ರಾಜಕಾರಣ- ಪ್ರಜಾಪ್ರಭುತ್ವದ ನಡುವಿನ, ಜಾತಿವಾದಿಗಳು- ರಾಷ್ಟ್ರವಾದಿಗಳ ನಡುವಿನ ಚುನಾವಣೆ. ಕೇರಳದಲ್ಲಿ ರಾಹುಲ್ ಗಾಂಧಿ ಅವರು ಹಣೆ ತುಂಬ ಕುಂಕುಮ ಇಟ್ಟುಕೊಂಡು, ಹರಕೆಯ ಕುರಿಯಂತೆ ಕಾಣುತ್ತಿದ್ದರು‌ ಎಂದು ಟೀಕಿಸಿದರು.

ಹೊಟ್ಟೆಗೆ ಇಲ್ಲದವರು ಸೇನೆ ಸೇರುತ್ತಾರೆ ಎಂದಿರುವ ಕುಮಾರಸ್ವಾಮಿ ಅವರ ಜೆಡಿಎಸ್‌ಗೆ ಸೇರೋರು ಮೂರೂ ಬಿಟ್ಟೋರು ತಾನೆ? ಎಂದು ಲೇವಡಿ ಮಾಡಿದರು.

ಬ್ರೇಕ್ ಇನ್ ಇಂಡಿಯಾ, ಮೇಕ್ ಇಂಡಿಯಾ ನಡುವಿನ ಚುನಾವಣೆ.‌ ಮೇಕ್ ಇನ್ ಇಂಡಿಯಾ ನೇತೃತ್ವ ಮೋದಿ ಅವರದ್ದು. ಬ್ರೇಕ್ ಇನ್ ಇಂಡಿಯಾ ನೇತೃತ್ವ ತುಕಡೆ ಗ್ಯಾಂಗ್ ನದ್ದು ಎಂದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !