ಸೋಮವಾರ, ಮಾರ್ಚ್ 20, 2023
24 °C

ಮಂಗಳೂರುನ ಮೊಬೈಲ್ ಟವರ್: ಸಾಮಗ್ರಿ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮೊಬೈಲ್‌ ಟವರ್‌ ನಿರ್ಮಾಣಕ್ಕಾಗಿ ನಗರದ ಅಡ್ಯಾರ್ ಗ್ರಾಮದ ಆರ್.ಕೆ.ಕಂಪೌಂಡಿನಲ್ಲಿರುವ ಆನಂದ ಟ್ರೇಡರ್ಸ್ ಮಳಿಗೆಯ ಬಳಿ ತಂದು ಹಾಕಿದ್ದ ಸೊತ್ತುಗಳು ಕಳವಾದ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನವ ಮುಂಬೈ ಕೈಗಾರಿಕಾ ವಲಯದಲ್ಲಿರುವ ಜಿ.ಟಿ.ಎಲ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯವರು ಮೊಬೈಲ್‌ ಟವರ್‌ ನಿರ್ಮಿಸಲು 2019ರಲ್ಲಿ ಅಡ್ಯಾರ್‌ನ ಆನಂದ ಟ್ರೇಡರ್ಸ್ ಮಳಿಗೆಯ ಬಳಿ ಸಾಮಗ್ರಿಗಳನ್ನು ತಂದು ಹಾಕಿದ್ದರು. ಕೋವಿಡ್‌ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್‌ ಹೇರಿದ್ದರಿಂದ ಅವರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. 2002ರಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ಈ ಸೊತ್ತುಗಳನ್ನು ಯಾರೋ ಕದ್ದೊಯ್ದದ್ದು ಕಂಡುಬಂದಿತ್ತು. ಒಟ್ಟು  ₹ 30,16,415 ಮೌಲ್ಯದ ಸ್ವತ್ತುಗಳನ್ನು ತಂದು ಹಾಕಲಾಗಿತ್ತು ಎಂದು ಈ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುವ ಸಂದೀಪ್‌ ಅವರು ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು