ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆಬಾಗಿಲು: ವಾರ್ಷಿಕ ಜಾತ್ರಾ ಮಹೋತ್ಸವ

Published 1 ಮೇ 2024, 13:36 IST
Last Updated 1 ಮೇ 2024, 13:36 IST
ಅಕ್ಷರ ಗಾತ್ರ

ಮೂಡುಬಿದಿರೆ: ಇಲ್ಲಿನ ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ ಎಡಪದವು ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಬೆಳಿಗ್ಗೆ ನಾಗದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ದೇವರಿಗೆ ಗಣಹೋಮ, ಕ್ಷೇತ್ರದಲ್ಲಿ ನವಕ ಹೋಮ ನಡೆಯಿತು. ಬಳಿಕ ವೀರಮಾರುತಿ ದೇವರ ಸನ್ನಿಧಿಯಲ್ಲಿ ವಾಯುಸ್ತುತಿ ಪುನಶ್ಚರಣ, ಸಾನಿಧ್ಯ ಕಲಶಾಭಿಷೇಕ, ದುರ್ಗಾಪರಮೇಶ್ವರಿ ದೇವರ ಸನ್ನಿಧಿಯಲ್ಲಿ ಚಂಡಿಕಾಯಾಗ, ದೇವಳದ ಪ್ರಧಾನ ಅರ್ಚಕ ದತ್ತಾತ್ರೇಯ ಭಟ್ ನೇತೃತ್ವದಲ್ಲಿ ಮಹಾಪೂಜೆ, ಪಲ್ಲಕಿ ಉತ್ಸವ ನಡೆಯಿತು.

ಸಂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ, ರಾತ್ರಿ ವಿಶೇಷ ರಂಗಪೂಜೆ, ಬಲಿ ಉತ್ಸವ, ಬಳಿಕ ಪ್ರಸಾದ ವಿತರಣೆ ನಡೆಯಿತು. ದೀಪಾ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರ ಸೇವೆಯಾಗಿ ಶ್ರೀಕ್ಷೇತ್ರ ಪಾವಂಜೆ ಯಕ್ಷಗಾನ ಮಂಡಳಿಯಿಂದ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ಕುಮಾರ್ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ನವೀನ್ ಹೆಗ್ಡೆ, ಹೆಗ್ಗಡೆ ಯುವ ಘಟಕದ ಅಧ್ಯಕ್ಷ ಪ್ರಮೋದ್ ಹೆಗ್ಡೆ, ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ಎಸ್. ಹೆಗ್ಡೆ, ಮುಂಬಯಿ ಹೆಗ್ಗಡೆ ಸೇವಾಸಂಘದ ಅಧ್ಯಕ್ಷ ಮನೋಜ್ ಕುಮಾರ್ ಹೆಗ್ಡೆ, ಬೆಂಗಳೂರು ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT