ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ್ವಾಸ್ ಕನ್ನಡ ಮಾಧ್ಯಮ ಪರೀಕ್ಷೆ ಬರೆದ 19 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು

Published 3 ಮಾರ್ಚ್ 2024, 13:19 IST
Last Updated 3 ಮಾರ್ಚ್ 2024, 13:19 IST
ಅಕ್ಷರ ಗಾತ್ರ

ಮೂಡುಬಿದಿರೆ: ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2024–25ನೇ ಸಾಲಿನ ಪ್ರವೇಶ ಪರೀಕ್ಷೆ ಭಾನುವಾರ ಇಲ್ಲಿ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ 19 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಕಳೆದ ವರ್ಷದವರೆಗೆ ಕೈ ಬರಹದ ಮೂಲಕ ಅರ್ಜಿ ಆಹ್ವಾನಿಸುವ ವ್ಯವಸ್ಥೆ ಇತ್ತು. ಹೆಚ್ಚು ಮಕ್ಕಳನ್ನು ತಲುಪುವ ಉದ್ದೇಶದಿಂದ ಈ ವರ್ಷ ಪ್ರಥಮ ಬಾರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದವರಲ್ಲಿ 19374 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 150 ವಿದ್ಯಾರ್ಥಿಗಳು ಶೃಂಗೇರಿಯಲ್ಲಿ ಪರೀಕ್ಷೆ ಬರೆದರು.

ಶನಿವಾರ ಸಂಜೆಯೇ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಮೂಡುಬಿದಿರೆ ವಿದ್ಯಾಗಿರಿಗೆ ಬಂದಿದ್ದರು. ಕೆಲವರು ಭಾನುವಾರ ಬೆಳಿಗ್ಗೆ ಪರೀಕ್ಷಾ ಕೇಂದ್ರಕ್ಕೆ ಬಂದರು. ಬೆಳಿಗ್ಗೆ 10ರಿಂದ 12-30ರವರೆಗೆ ವಿದ್ಯಾಗಿರಿ ಮತ್ತು ಪುತ್ತಿಗೆಯ 7 ಕಡೆಗಳಲ್ಲಿ ಏಕಕಾಲದಲ್ಲಿ ಪರೀಕ್ಷೆ ನಡೆಯಿತು.

ಬೆಳಗಾವಿಯಿಂದ 6426, ಬಾಗಲಕೋಟೆಯಿಂದ 3132, ವಿಜಯಪುರದಿಂದ 2096, ಗದಗದಿಂದ 1286 ಮತ್ತು ಹಾವೇರಿಯಿಂದ 1085 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ವಿದ್ಯಾರ್ಥಿಗಳಿಗೆ  ಪರೀಕ್ಷಾ ಕೇಂದ್ರಕ್ಕೆ ತೆರಳಲು ತೊಂದರೆ ಆಗದಂತೆ ಪೂರಕ ವ್ಯವಸ್ಥೆ, ಪೋಷಕರು ಉಳಿದುಕೊಳ್ಳಲು ಹಾಗೂ ಅವರ ವಾಹನಗಳ ನಿಲುಗಡೆಗೆ ಆಳ್ವಾಸ್ ಕ್ಯಾಂಪಸ್‌ನೊಳಗೆ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ಗೊಂದಲಗಳಿಲ್ಲದೆ ಅಚ್ಚುಕಟ್ಟಾಗಿ ಪರೀಕ್ಷೆ ನಡೆಯಿತು.

ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳ  ಚಿಂತನಾ ಸಾಮರ್ಥ್ಯ, ಲಿಖಿತ ಪರೀಕ್ಷೆಯಲ್ಲಿ ಕಲಿಕಾ ಸಾಮರ್ಥ್ಯ ಮತ್ತು ಕೌಶಲ ಗಮನಿಸಿ ಬಳಿಕ ಸಂದರ್ಶನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ 6ರಿಂದ 10ನೇ ತರಗತಿವರೆಗೆ ವಸತಿ ಮತ್ತು ಊಟದ ಸೌಲಭ್ಯದೊಂದಿಗೆ ಉಚಿತ ಶಿಕ್ಷಣದ ನೀಡಲಾಗುತ್ತದೆ.
ಕಳೆದ ವರ್ಷ ಕನ್ನಡ ಮಾಧ್ಯಮ ಶಾಲೆ ಪ್ರವೇಶ ಪರೀಕ್ಷೆಯನ್ನು 19,934 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

‘ಸರ್ಕಾರದ ವಸತಿ ಶಾಲೆಗಳ ಜತೆ ಅಳ್ವಾಸ್ ಕನ್ನಡ ಮಾಧ್ಯಮ ಶಾಲೆಯನ್ನು ಸೇರ್ಪಡೆ ಮಾಡಿದರೆ ಕನ್ನಡ ಮಾಧ್ಯಮ ಶಾಲೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ರಾಜ್ಯಕ್ಕೆ ಮಾದರಿ ಶಾಲೆಯಾಗಿ ರೂಪಿಸಲು ಬದ್ಧ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಅಳ್ವ ಹೇಳಿದ್ದಾರೆ.

ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಪ್ರವೇಶಕ್ಕೆ ಭಾನುವಾರ ಪರೀಕ್ಷೆ ಬರೆಯಲು ರಾಜ್ಯದ ವಿವಿಧೆಡೆಯಿಂದ  ಬಂದಿದ್ದ ವಿದ್ಯಾರ್ಥಿಗಳು
ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಪ್ರವೇಶಕ್ಕೆ ಭಾನುವಾರ ಪರೀಕ್ಷೆ ಬರೆಯಲು ರಾಜ್ಯದ ವಿವಿಧೆಡೆಯಿಂದ  ಬಂದಿದ್ದ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT