ಗುರುವಾರ , ಜನವರಿ 21, 2021
30 °C

ರವಿ ಕಟಪಾಡಿಗೆ ಮೂಲತ್ವ ವಿಶ್ವ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮೂಲತ್ವ ಫೌಂಡೇಶನ್ ಚಾರಿಟಬಲ್ ಟ್ರಸ್ಟ್‌ ಕೊಡಮಾಡುವ ‘ಮೂಲತ್ವ ವಿಶ್ವ ಪ್ರಶಸ್ತಿ 2020’ಯನ್ನು ನಗರದ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ಭಾನುವಾರ ಕಟಪಾಡಿಯ ಸಮಾಜ ಸೇವಾ ಕಾರ್ಯಕರ್ತ ಹಾಗೂ ‘ರವಿ ಫ್ರೆಂಡ್ಸ್’ ನ ಸ್ಥಾಪಕ ರವಿ ಕಟಪಾಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರವಿ ಕಟಪಾಡಿ, ‘ಜೀವನದಲ್ಲಿ ಹಣ ಸಂಪಾದನೆ ಮುಖ್ಯವಲ್ಲ. ಜನರ ಪ್ರೀತಿ– ವಿಶ್ವಾಸ ಗಳಿಸುವುದು ಮುಖ್ಯ. ನಾನು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಸ್ನೇಹಿತರ ಜತೆಗೂಡಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ವಿಶೇಷ ವೇಷ ಧರಿಸಿ ಹಣ ಸಂಗ್ರಹಿಸಿ, ಅನಾರೋಗ್ಯ ಪೀಡಿತ ಮಕ್ಕಳಿಗೆ ವಿತರಿಸುತ್ತಿದ್ದೇನೆ. ಕಳೆದ 6 ವರ್ಷಗಳಲ್ಲಿ ₹54.5 ಲಕ್ಷ  ಸಂಗ್ರಹಿಸಿ 28 ಮಕ್ಕಳ ಚಿಕಿತ್ಸೆಗೆ ನೀಡಿದ್ದೇವೆ. ಜನರು ನನ್ನ ಮೇಲೆ ವಿಶ್ವಾಸ ಇರಿಸಿದ್ದು, ಉದಾರವಾಗಿ ನೆರವಾಗುತ್ತಿದ್ದಾರೆ. ಇದೇ ರೀತಿ ₹1 ಕೋಟಿ. ನೆರವು ಒದಗಿಸುವ ಉದ್ದೇಶ ಹೊಂದಿದ್ದು, ಕೈಕಾಲು ಗಟ್ಟಿ ಇರುವ ತನಕ ಮತ್ತು ಸ್ನೇಹಿತರು ಸಹಕಾರ ಕೊಡುವ ತನಕ ಈ ಸೇವಾ ಕಾರ್ಯ ಮುಂದುವರಿಯಲಿದೆ’ ಎಂದರು.

ಪ್ರಶಸ್ತಿಯು ₹50 ಸಾವಿರ ನಗದು, ಶಾಲು, ಪ್ರಶಸ್ತಿ ಪತ್ರ, ಸ್ಮರಣಿಕೆ, ಪೇಟವನ್ನು ಒಳಗೊಂಡಿದೆ.

ದಾಯ್ಜಿ ವರ್ಲ್ಡ್ ಸಂಸ್ಥೆಯ ವಾಲ್ಟರ್ ನಂದಳಿಕೆ, ಗುತ್ತಿಗೆದಾರ ಪುರುಷೋತ್ತಮ ಕೊಟ್ಟಾರಿ, ವಿಕಾಸ್ ಕಾಲೇಜಿನ ಡೀನ್ ಡಾ. ಮಂಜುಳಾ ಅನಿಲ್ ರಾವ್, ಮೂಲತ್ವ ಫೌಂಡೇಶನ್ ಚಾರಿಟಬಲ್ ಟ್ರಸ್ಟ್‌ ಸ್ಥಾಪಕ ಅಧ್ಯಕ್ಷ ಪ್ರಕಾಶ್ ಮೂಲತ್ವ, ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಶೈನಿ ಡಿಸೋಜ, ಲಕ್ಷ್ಮೀಶ ಕೋಟ್ಯಾನ್, ಪ್ರಶಸ್ತಿಯ ಸಂಚಾಲಕ ಹರೀಶ್ ಪೂಜಾರಿ , ರಾಜ್‌ಮೋಹನ್ ರಾವ್, ಹರೀಶ್ ಪೂಜಾರಿ, ಮಂಜುಳಾ ಶೆಟ್ಟಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು