ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ್ಕಿಯಿಂದ ಮೂಡುಬಿದಿರೆಗೆ ಜಾಥಾ

ಕಾರ್ನಾಡು ಸದಾಶಿವ ರಾಯರ ಹುಟ್ಟೂರಿಂದ ಅಬ್ಬಕ್ಕ ಹುಟ್ಟೂರಿಗೆ ತಿರಂಗಾ
Last Updated 15 ಆಗಸ್ಟ್ 2022, 3:56 IST
ಅಕ್ಷರ ಗಾತ್ರ

ಮೂಲ್ಕಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮೂಲ್ಕಿಯಿಂದ ಮೂಡುಬಿದಿರೆ ವರೆಗೆ ತಿರಂಗಾ ಯಾತ್ರೆಗೆ ಭಾನುವಾರ ಮೂಲ್ಕಿಯ ಬಪ್ಪನಾಡು ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಲಾಯಿತು.

ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡು ಸದಾಶಿವರಾಯವರ ಹುಟ್ಟೂರಾದ ಮೂಲ್ಕಿಯಿಂದ ರಾಣಿ ಅಬ್ಬಕ್ಕ ಹೂಟ್ಟೂರಾದ ಮೂಡುಬಿದಿರೆಗೆ 29 ಕಿ.ಮೀ. ಪಾದಯಾತ್ರೆಯು100 ಮೀ ಉದ್ದದ ರಾಷ್ಟ್ರ ದ್ವಜದೊಂದಿಗೆ ಸಾಗಿತು.

ಸಂಸದ ನಳಿನ್‌ ಕುಮಾರ್ ಕಟೀಲ್ ಹಾಗೂ ಶಾಸಕ ಉಮಾನಾಥ ಎ. ಕೋಟ್ಯಾನ್ ಚಾಲನೆ ನೀಡಿದರು.
ಭಾರತ ಮಾತೆಯ ಭಾವಚಿತ್ರ ಹಾಗೂ ವಿವಿಧ ವಾದ್ಯ ಘೋಷದಿಂದಿಗೆ ಕಾರ್ನಾಡು, ಕಿಲ್ಪಾಡಿ, ಕೆರೆಕಾಡು, ಪುನರೂರು, ಎಸ್.ಕೋಡಿ, ಪದ್ಮ ನೂರು, ಕಿನ್ನಿಗೋಳಿ, ಮೂರು ಕಾವೇರಿ, ನಿಡ್ಡೋಡಿ, ಕಲ್ಲ ಮೂಂಡ್ಕೂರು, ಸಂಪಿಗೆ ಮತ್ತು ಪುತ್ತಿಗೆಯನ್ನು ಹಾದು ವಿದ್ಯಾಗಿರಿಯ ಮೂಲಕ ಮೂಡುಬಿದಿರೆ ಪೇಟೆಗೆ ಸಾಗಿ ಬಂದು, ಸಮಾರೋಪ ಸಮಾರಂಭ ನಡೆಯಿತು.

ಸುಮಾರು 3 ಸಾವಿರ ಮಂದಿ ಧ್ವಜವನ್ನು ಹೊತ್ತು ಸಾಗಿದ್ದು, ದಾರಿ ಉದ್ದಕ್ಕೂ ಪುಷ್ಪಾರ್ಚನೆ ದೇಶಭಕ್ತಿಗೀತೆಯ ಗಾಯನದೊಂದಿಗೆ ಸ್ವಾತಂತ್ರ್ಯ ಹೋರಾಟಗಾರರ ಭಿತ್ತಿ ಚಿತ್ರದೊಂದಿಗೆ ಸಾಗಿತು. ಅಲ್ಲಲ್ಲಿ ಪಾನಕದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸುನೀಲ್ ಆಳ್ವ, ಗೋಪಾಲ್ ಶೆಟ್ಟಿಗಾರ್, ಕೇಶವ್ ಕರ್ಕೇರ, ಅಭಿಲಾಷ್ ಶೆಟ್ಟಿ, ಲಕ್ಶ್ಮಣ್ ಪೂಜಾರಿ, ಭಾರತಿ ಶೆಟ್ಟಿ, ದುಗ್ಗಣ್ಣ ಸಾವಂತರು, ಮನೋಹರ ಶೆಟ್ಟಿ, ಈಶ್ವರ ಕಟೀಲು, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಸುದರ್ಶನ್, ಕಸ್ತೂರಿ ಪಂಜ, ಅರವಿಂದ ಪೂಂಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT