ಭಾನುವಾರ, ಆಗಸ್ಟ್ 14, 2022
23 °C
ರಾಷ್ಟ್ರ ಪ್ರಶಸ್ತಿ ವಿಜೇತ ಯಾಕೂಬ್ ಮಾಸ್ಟರ್‌ಗೆ ರಾಜ್ಯ ದಾರಿಮಿ ಒಕ್ಕೂಟದ ಸನ್ಮಾನ

ಬೆಳ್ತಂಗಡಿ: ಶಿಕ್ಷಣಕ್ಕೆ ಉತ್ತೇಜನ; ಉಲಮಾಗಳಿಗೆ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳ್ತಂಗಡಿ: ತಾಲ್ಲೂಕಿನ ನಡ ಗ್ರಾಮದ ಸರ್ಕಾರಿ ಪ್ರೌಢಶಾಲೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಲು ಕಾರಣರಾದ ಶಿಕ್ಷಕ ಯಾಕೂಬ್ ಮಾಸ್ಟರ್ ಕೊಯ್ಯೂರು ಅವರನ್ನು ಅವರದೇ ಗಣಿತ ಪ್ರಯೋಗಾಲಯಲ್ಲಿ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಎಸ್. ಬಿ. ಮುಹಮ್ಮದ್ ದಾರಿಮಿ ಮಾತನಾಡಿ, ‘ಇದೊಂದು ಅದ್ಭುತ ಸಾಹಸ. ಮನಸ್ಸು ಮಾಡಿದರೆ ಎಂತಹ ಸಾಧನೆಯನ್ನೂ ಮಾಡಬಹುದು ಎಂದು ಯಾಕೂಬ್ ನಿರೂಪಿಸಿದ್ದಾರೆ. ಇದು ರಾಜ್ಯ ಹೆಮ್ಮೆ ಪಡುವ ವಿಚಾರ’ ಎಂದು ಬಣ್ಣಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಯಾಕೂಬ್, ‘ನಿಮ್ಮ ಸನ್ಮಾನವು ನನಗೆ ಆಶೀರ್ವಾದ. ಇನ್ನಷ್ಟು ಸಾಧನೆಗಳನ್ನು ಮಾಡುವ ಉದ್ದೇಶವಿದೆ. ನಾನು, ನನ್ನ ವೃತ್ತಿಯನ್ನು ಅತ್ಯಂತ ಪ್ರೀತಿಯಿಂದ ಮಾಡುತ್ತೇನೆ. ಆದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಇದಕ್ಕೆ ಅನೇಕ ಮಂದಿಯ ಸಹಕಾರ ಮರೆಯಲಾಗದು. ಉಲಮಾಗಳು ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ’ ಎಂದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಜೀಜ್‌ ದಾರಿಮಿ ಚೊಕ್ಕಬೆಟ್ಟು, ತಬೂಕು ದಾರಿಮಿ ಉಸ್ತಾದ್, ಕೆ. ಎಲ್. ಉಮರ್ ದಾರಿಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.