ಉಜಿರೆ: ಇಲ್ಲಿನ ಎಸ್ಡಿಎಂ ಸ್ವಾಯತ್ತ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಶೈಲೇಶ್ ಕುಮಾರ್ ರಚಿಸಿದ ಕಾರ್ಟೂನ್ಗೆ ರಾಷ್ಟ್ರಮಟ್ಟದಲ್ಲಿ ವಿಶೇಷ ಬಹುಮಾನ ದೊರಕಿದೆ.

ವಿಶ್ವ ಪರಿಸರ ದಿನದ ಅಂಗವಾಗಿ ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಎಂಬ ಧ್ಯೇಯವಾಕ್ಯದಡಿಯಲ್ಲಿ ಛತ್ತೀಸ್ಗಡ ಪರಿಸರ ಸಂರಕ್ಷಣಾ ಮಂಡಳಿ ಮತ್ತು ಕಾರ್ಟೂನ್ ಮ್ಯಾಗಜಿನ್ ಸ್ಪರ್ಧೆ ಆಯೋಜಿಸಿತ್ತು. ಬಾಣ ಬಿಟ್ಟು ಬಾಲಕಿಯೊಬ್ಬಳು ಪ್ಲಾಸ್ಟಿಕ್ ಮಾರಿಯನ್ನು ಓಡಿಸಿ ಭೂಮಿಯನ್ನು ರಕ್ಷಿಸುವ ಸನ್ನಿವೇಶವನ್ನು ಅವರು ಕಾರ್ಟೂನ್ ಮಾದರಿಯಲ್ಲಿ ಚಿತ್ರಿಸಿದ್ದರು.

ಉಜಿರೆ: ಸದ್ಯದಲ್ಲೇ ಅಕ್ಕ ಕೆಫೆ ಆರಂಭ

ಉಜಿರೆ: ಆದಿಪರಾಶಕ್ತಿ ಸ್ವಸಹಾಯ ಸಂಘದ ಆಶ್ರಯದಲ್ಲಿ ಉಜಿರೆಯಲ್ಲಿ ಸದ್ಯದಲ್ಲಿಯೇ ‘ಅಕ್ಕ’ ಕೆಫೆ ಆರಂಭವಾಗಲಿದೆ ಎಂದು ಸ್ವ-ಸಹಾಯ ಸಂಘದ ಅಧ್ಯಕ್ಷೆ ಲೀಲಾವತಿ ಎಂ.ಕೆ. ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳ್ಳಾಲ ಮತ್ತು ಬೆಳ್ತಂಗಡಿಗೆ ಅಕ್ಕ ಕೆಫೆ ಮಂಜೂರಾಗಿದ್ದು ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿ ಚಾರ್ಮಾಡಿ ರಸ್ತೆ ಬದಿ ಆರಂಭವಾಗಲಿದೆ. ಮಹಿಳೆಯರೇ ನಡೆಸುವ ಕೆಫೆಯಲ್ಲಿ ಸ್ಥಳೀಯ ಆಹಾರ ಪದಾರ್ಥಗಳು ಸಿಗಲಿದ್ದು ನಾಲ್ವರು ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.