ಸುಬ್ರಹ್ಮಣ್ಯ: ರಾಷ್ಟ್ರಮಟ್ಟದ ನೆಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಚಿನ್ನದ ಪದಕ ಪಡೆದ ಬಾಲಕಿಯರ ಕರ್ನಾಟಕ ತಂಡಕ್ಕೆ ಸುಬ್ರಹ್ಮಣ್ಯದ ಎಸ್ಎಸ್ಪಿಯು ಕಾಲೇಜಿನ ಆಡಳಿತ ಮಂಡಳಿ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ರಕ್ಷಕ ಸಂಘದ ವತಿಯಿಂದ ಮಂಗಳವಾರ ಸ್ವಾಗತಿಸಲಾಯಿತು.

ವಿಜೇತ ತಂಡದಲ್ಲಿದ್ದ ಸುಬ್ರಹ್ಮಣ್ಯದ ಎಸ್ಎಸ್ಪಿಯು ಕಾಲೇಜಿನ ವಿದ್ಯಾರ್ಥಿನಿ ತಪಸ್ಯಾ ಎಸ್. ನಾಯಕ್ ಅವರನ್ನು ದೇವಳದ ಮುಂಭಾಗದಲ್ಲಿ ಗೌರವಿಸಲಾಯಿತು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಿಂದ ತೆರೆದ ವಾಹನದಲ್ಲಿ ಎಸ್ಎಸ್ಪಿಯು ಕಾಲೇಜಿನವರೆಗೆ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಲೀಲಾ ಮನಮೋಹನ್ ಉದ್ಘಾಟಿಸಿದರು. ಮಾಸ್ಟರ್ ಪ್ಲ್ಯಾನ್ ಸಮಿತಿ ಸದಸ್ಯ ಪವನ್ ಎಂ.ಡಿ. ಅತಿಥಿಗಳಾಗಿದ್ದರು. ಪ್ರಾಚಾರ್ಯ ಸೋಮಶೇಖರ ನಾಯಕ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್., ಉಪಾಧ್ಯಕ್ಷರಾದ ಲೋಕೇಶ್ ಬಿ.ಎನ್., ದೀಪಕ್ ನಂಬಿಯಾರ್, ಕಾರ್ಯದರ್ಶಿ ರತ್ನಾಕರ ಎಸ್., ಶಿಕ್ಷಕ– ರಕ್ಷಕ ಸಂಘದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಉಪಾಧ್ಯಕ್ಷ ಗುಣವರ್ಧನ ಕೆದಿಲ, ಪ್ರಮುಖರಾದ ಪ್ರೇಮನಾಥ ಶೆಟ್ಟಿ, ನವೀನ್ ಹೆಗ್ಡೆ, ತುಷಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.