ಮಂಗಳೂರು: ಕರಾವಳಿಯಾದ್ಯಂತೆ ಹೊಸ ವರ್ಷಾಚರಣೆ ಸಂಭ್ರಮ ಸಡಗರದಿಂದ ನಡೆದಿದ್ದು, ಕ್ರೈಸ್ತರು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.

ಕರಾವಳಿಯಲ್ಲಿರುವ ಕ್ರೈಸ್ತರು ಚರ್ಚ್ಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಂಜೆಯಾಗುತ್ತಿದ್ದಂತೆ, ಕ್ರೈಸ್ತರು ಚರ್ಚ್ಗಳಲ್ಲಿ ಆರಾಧನೆ, ಬಲಿಪೂಜೆ ಸೇರಿದಂತೆ ವಿಶೇಷ ಪ್ರಾರ್ಥನೆ ನಡೆಸಿ, ಹಳೆಯ ವರ್ಷದಲ್ಲಿನ ಕಹಿ ನೆನಪುಗಳನ್ನು ಮರೆತು, ಸಿಹಿ ಗಳಿಗೆಗಳಿಗಾಗಿ ದೇವರಿಗೆ ಸ್ತುತಿ ಸ್ತೋತ್ರ ಸಲ್ಲಿಸಿದರು. ಹೊಸ ವರ್ಷ ಜಗತ್ತಿಗೆ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.

ನಗರದ ಮಿಲಾಗ್ರಿಸ್, ರೊಸಾರಿಯೋ ಚರ್ಚ್, ಬಿಷಪ್ ಹೌಸ್ ಸೇರಿದಂತೆ ಎಲ್ಲ ಚರ್ಚ್ಗಳಲ್ಲಿ ಬಲಿಪೂಜೆ, ಆರಾಧನೆ ನೆರವೇರಿಸಲಾಯಿತು. ಬಿಷಪ್ ಹೌಸ್ನಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ಡಾನ ಅವರು ಬಲಿಪೂಜೆ ನೆರವೇರಿಸಿದರು. ಸಾವಿರಾರು ಕ್ರೈಸ್ತರು ಚರ್ಚ್ಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.